ಅಥಣಿ ಉಪವಿಭಾಗದ ಠಾಣೆ ಪೊಲೀಸರು ಮಾಲೀಕರಿಗೆ ಮೊಬೈಲ್ ಪೋನ್ ಹಸ್ತಾಂತರಿಸಿದರು. 
ಬೆಳಗಾವಿ

ಮಾಲೀಕರಿಗೆ 110 ಮೊಬೈಲ್ ಪೋನ್ ಹಸ್ತಾಂತರ

ಬೆಳಗಾವಿ: ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಸಿ ರಜಿಸ್ಟರ್ ( ಸಿಇಐಆರ್) ಪೋರ್ಟ್‌ನಲ್ಲಿ ನೋಂದಾಯಿಸಿದ್ದ 110 ಕದ್ದ ಮತ್ತು ಕಳೆದುಹೋಗಿದ್ದ ಮೊಬೈಲ್ ಪೋನ್‌ಗಳನ್ನು ಸಿಇಎನ್ (ಸೈಬರ್, ಆರ್ಥಿಕ ಅಪರಾಧ ಹಾಗೂ ಮಾದಕ ದ್ರವ್ಯ ) ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಥಣಿ ಉಪವಿಭಾಗದ ಅಥಣಿ, ಐಗಳಿ, ಕಾಗವಾಡ, ಹಾರೂಗೇರಿ, ಕುಡಚಿ, ರಾಯಬಾಗ ಸಿಇಎನ್ ಅಪರಾಧ ಠಾಣೆಗಳಲ್ಲಿ 917 ಮೊಬೈಲ್ ಕಳವಾದ ಮತ್ತು ಕಳೆದುಹೋದ ಬಗ್ಗೆ ಪ್ರಕರಣ ದಾಖಲಾಗಿದ್ದವು. ಈ ಪೈಕಿ ಪತ್ತೆಯಾದ 460 ಮೊಬೈಲ್ ಪೋನ್‌ಗಳ ಪೈಕಿ 260 ಮೊಬೈಲ್ ವಶಪಡಿಸಕೊಳ್ಳಲಾಗಿದೆ. ಹಂತ ಹಂತವಾಗಿ ಠಾಣಾ ಮಟ್ಟದಲ್ಲಿಯೇ ಮಾಲೀಕರಿಗೆ ಹಿಂದಿರುಗಿಸಲಾಗುತ್ತಿದೆ. ಶುಕ್ರವಾರ 110 ಮೊಬೈಲ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಮೋಬೈಲ್ ಪೋನ್ ಕದ್ದ ಮತ್ತು ಕಳೆದುಹೋಗಿರುವ ಕುರಿತು ಜನರು ಸಿಇಐಆರ್ ಪೋರ್ಟ್‌ನಲ್ಲಿ ದೂರು ದಾಖಲಿಸುತ್ತಾರೆ. ಅದನ್ನು ಆಧರಿಸಿ ತನಿಖೆ ಕೈಗೊಳ್ಳುತ್ತೇವೆ. ಈ ಪೋನ್‌ಗಳನ್ನು ಯಾರಾದರೂ ತಮ್ಮ ಸಿಮ್‌ಕಾರ್ಡ್ ಹಾಕಿದ ತಕ್ಷಣವೇ ತಮ ಮಾಹಿತಿ ಸಿಗುತ್ತದೆ. ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ವಾಪಸ್ ನೀಡಲು ಕೇಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.