ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಡಿಸಿ ಮೊಹಮ್ಮದ ರೋಷನ್ ಮಾತನಾಡಿದರು 
ಬೆಳಗಾವಿ

ಜಿಲ್ಲೆಯಲ್ಲಿ 1.10 ಲಕ್ಷ ಮೃತ, ಅನರ್ಹ ಮತದಾರರ ಪತ್ತೆ

ಬೆಳಗಾವಿ:ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಬರೋಬ್ಬರಿ 1.10 ಲಕ್ಷ ಮೃತ ಹಾಗೂ ಅನರ್ಹ ಮತದಾರರ ಹೆಸರುಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಆಯೋಗವು ನಕಲಿ ಮತ್ತು ಮೃತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಬೃಹತ್ ಮನೆ ಮನೆ ಸಮೀಕ್ಷೆ ಹಾಗೂ ಪರಿಷ್ಕರಣೆ ನಡೆಸುತ್ತಿರುವ ಹಿನ್ನೆಲೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿನ ಒಟ್ಟು 41.07 ಲಕ್ಷ ಮತದಾರರಿದ್ದಾರೆ. ಆ ಪೈಕಿ 98 ಸಾವಿರಕ್ಕೂ ಅಧಿಕ ವ್ಯಕ್ತಿಗಳು ಮೃತರಾಗಿದ್ದರೆ, 4ಸಾವಿರಕ್ಕೂ ಅನರ್ಹ ಮತದಾರರ ಹೆಸರು ಪತ್ತೆಯಾಗಿವೆ. ಅಲ್ಲದೆ, 1ಲಕ್ಷಕ್ಕೂ ಅಧಿಕ ಜನರು ಎರಡು ಕಡೆ ಮತ ಚೀಟಿ ಹೊಂದಿರುವುದು ಬೆಳಕಿಗೆ ಬಂದಿದೆ.
ಈಗಾಗಲೇ ಜಿಲ್ಲೆಯಲ್ಲಿ 41.97 ಲಕ್ಷ ಮತದಾರರಿಗೆ ಜೂನ್ 30ರಿಂದ ಆರಂಭವಾಗಿರುವ ಗಣತಿ ನಮೂನೆ (ಇಎಫ್) ವಿತರಣೆ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿದೆ.33.10 ಲಕ್ಷ ಮತದಾರರು ಇಎಫ್ ಅರ್ಜಿಗಳನ್ನು ಭರ್ತಿ ಮಾಡಿ ವಾಪಸ್ ನೀಡಿದ್ದು,ಇಲ್ಲಿಯರೆಗೆ ಶೇ.13ರಷ್ಟು ಮಾತ್ರೆ ಇಎಫ್‌ಗಳು ಮಾತ್ರ ಡಿಜಿಟಲೀಕರಣಗೊಂಡಿವೆ. ಇನ್ನೂ ಶೇ.87 ರಷ್ಟು ಬಾಕಿ ಉಳಿದಿದೆ. ಆಯೋಗವು ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್ 8ರವರೆಗೆ ಕಾಲವಕಾಶ ಕಲ್ಪಿಸಿದೆ ಎಂದರು.
ಈಗಾಗಲೇ ಎಸ್‌ಐಆರ್ ಪ್ರಗತಿ ಕುರಿತು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮೇಲಿಂದ ಮೇಲೆ ಸಭೆ ನಡೆಸಿ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. 2002 ಮತ್ತು 2025 ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಹೊಸದಾಗಿ ಮತದಾರರ ಅರ್ಜಿ ಸಲ್ಲಿಸಬೇಕು. ಜತೆಗೆ ದಾಖಲೆಗಳನ್ನು ಸಲ್ಲಿಸಬೇಕು. ಬಳಿಕ ಹೊಸ ಮತದಾರರ ಪಟ್ಟಿ ಸೇರ್ಪಡೆಗೆ ನಮೂದ ಮಾಡುತ್ತೇವೆ. ಇಎಫ್ ತುಂಬಿ ವಾಪಸ್ ನೀಡದಿರುವ ಹೆಸರುಗಳನ್ನು ಶಾಶ್ವತವಾಗಿ ಮತದಾರರ ಪಟ್ಟಿಯಿಂದಲೇ ಕೈಬಿಡಬೇಕಾಗುತ್ತದೆ. ಹೀಗಾಗಿ ಬಿಎಲ್‌ಒಗಳ ಕಡೆಯಿಂದ ಇಎಫ್ ಅರ್ಜಿಗಳನ್ನು ಪಡೆದು ನಿಗದಿತ ಸಮಯದಲ್ಲಿ ವಾಪಸ್ ನೀಡಬೇಕು ಎಂದು ವಿನಂತಿಸಿದರು.
ಡಾ.ವಿಜಯಕುಮಾರ ಹೊನಕೇರಿ ಇತರರಿದ್ದರು.
....................
ಬಾಕ್ಸ್
ದೇವದಾಸಿ ಕುಟುಂಬ ವಿಶೇಷ ಪ್ರಕರಣ
ಜಿಲ್ಲಾಯಾದ್ಯಂತ ಅಲ್ಲಲ್ಲಿರುವ ದೇವದಾಸಿ ಕುಟುಂಬಗಳಿಗೆ ಎಎಫ್ ಅರ್ಜಿಯ ಕಾಲಂಗಳಲ್ಲಿ ಕೆಲ ತುಂಬುದು ಸಮಸ್ಯೆ ಎದುರಾಗಿರುವ ಕುರಿತು ದೂರುಗಳು ಬಂದಿರುವ ಹಿನ್ನೆಲೆ ಅಂತಹವುಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗುತ್ತಿದೆ. ದೇವದಾಸಿ ಕುಟುಂಬದ ಸದಸ್ಯರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಹೆಚ್ಚಿನ ಆದ್ಯತೆ ಕ್ರಮ ವಹಿಸಲಾಗುವುದು ಎಂದು ಡಿಸಿ ಮೊಹಮ್ಮದ ರೋಷನ್ ತಿಳಿಸಿದರು.
.................
ಬಾಕ್ಸ್
ಅಲೆಮಾರಿ ಕುಟುಂಬಗಳ ಸಂಪರ್ಕ
ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಲೆಮಾರಿ ಕುಟುಂಬಗಳನ್ನು ಸಂಪರ್ಕಿಸಿ ಇಎಫ್ ಅರ್ಜಿಗಳನ್ನು ಬಿಎಲ್‌ಒಗಳು ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಉದ್ಯೋಗ ಹುಡುಕಿಕೊಂಡು ಮಹಾರಾಷ್ಟ್ರ, ಗೋವಾ, ಬೆಂಗಳೂರು ಸೇರಿ ವಿವಿಧ ಭಾಗಗಳಿಗೆ ವಲಸೆ ಹೋಗಿರುವ ಕಾರ್ಮಿಕರನ್ನು ಸಂಪರ್ಕಿಸಿ ಇಎಫ್ ಅರ್ಜಿಗಳನ್ನು ನೀಡಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿರುವ ವಾಹನ ಚಾಲಕರು, ವಿದ್ಯಾರ್ಥಿಗಳು, ಐಟಿ ಬಿಟಿ ಕಂಪನಿಯ ನೌಕರರುನ್ನು ಸಂಪರ್ಕಿಸುವ ಕೆಲಸ ಮಾಡಲಾಗುತ್ತಿದೆ ಎಂದು ಡಿಸಿ ಮೊಹಮ್ಮದ ರೋಷನ್ ಸ್ಪಷ್ಟಪಡಿಸಿದರು.
.........
ಬಾಕ್ಸ್
ಮರಾಠಿ ಭಾಷೆಯಲ್ಲಿ ಇಎಫ್ ಅರ್ಜಿ ಇಲ್ಲ
ಈಗಾಗಲೇ ರಾಜ್ಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ಹಿನ್ನೆಲೆ ಕನ್ನಡ ಮತ್ತು ಇಂಗ್ಲೀಷ್ ಹೊರತು ಪಡಿಸಿ ಮರಾಠಿ ಭಾಷೆಯಲ್ಲಿ ಇಎಫ್ ಅರ್ಜಿಗಳನ್ನು ನೀಡಲು ಸಾಧ್ಯವಿಲ್ಲ. ಈ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ಸಾಧಕ ಬಾಧಕ ಮನವರಿಕೆ ಮಾಡಿದ್ದರಿಂದ ಯಾರು ವಿರೋಧ ಮಾಡಿಲ್ಲ. ಹೀಗಾಗಿ ಮರಾಠಿ ಭಾಷಿಕರು ಎಸ್‌ಐಆರ್ ಬಹಿಷ್ಕರಿಸುವ ಅವಶ್ಯಕತೆ ಇಲ್ಲ. ನಿಮಗೆ ಅನುಕೂಲವಾಗುವ ರೀತಿಯಲ್ಲಿ ಮಾದರಿಯಾಗಿ ಮರಾಠಿ ಭಾಷೆಯಲ್ಲಿ ಒಂದು ಇಎಫ್ ಅರ್ಜಿಗಳನ್ನು ನೀಡಲಾಗುತ್ತಿದ್ದು, ಅದನ್ನು ನೋಡಿಕೊಂಡು ಅರ್ಜಿ ತುಂಬ ಬಹುದು ಎಂದು ಡಿಸಿ ಮೊಹಮ್ಮದ ರೋಷನ್ ವಿವರಿಸಿದರು.
................