ನಂದೇಶ್ವರ ಸಮೀಪದ ಸತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಛದ್ಮವೇಷ ಧರಿಸಿ ಸಂಭ್ರಮಿಸಿದರು.
- ಆರತಿ ಖೋತ ಅಭಿಪ್ರಾಯ
- ಪ್ರತಿಭಾ ಕಾರಂಜಿ, ಕಲೋತ್ಸವ
ನಂದೇಶ್ವರ: ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯ ಎಂದು ಸತ್ತಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಆರತಿ ಖೋತ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸತ್ತಿ ವಲಯದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಜ್ಞಾನ ಒದಗಿಸಬೇಕು. ಪ್ರತಿಭಾಕಾರಂಜಿ ಕಲೋತ್ಸವ ಮಕ್ಕಳ ಪ್ರತಿಭೆ ಹೊರತರಲು ಮುಖ್ಯ ವೇದಿಕೆಯಾಗಿದೆ ಎಂದರು.
ಮುಖ್ಯಶಿಕ್ಷಕ ಕುಮಾರಸ್ವಾಮಿ ಮಠ, ನಿವೃತ್ತ ಶಿಕ್ಷಕ ಐ.ಎಂ.ದೊಡಮನಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶ ದೊಡಮನಿ, ರಾವಸಾಹೇಬ ಜಿನರಾಳ, ಅಣ್ಣಪ್ಪ ರುದ್ರಗೌಡರ, ಶ್ರೀಪಾಲ ಕಾಂಬಳೆ, ಅಣ್ಣಪ್ಪ ಬ್ಯಾಳಗೌಡರ, ಮಲ್ಲಯ್ಯ ಮಠಪತಿ, ಎಸ್.ಎಂ.ಗಾಣಗಿ, ನಿಕಟಪೂರ್ವ ಸಂಪನ್ಮೂಲ ವ್ಯಕ್ತಿ ಆರ್.ಕೆ.ಹಳ್ಳೋಳ್ಳಿ, ಐ.ಎಂ.ಕಮಾಲನವರ, ಎಸ್.ಬಿ.ಲಾಲಸಿಂಗಿ, ಎಸ್.ಎಲ್.ಮೇಲ್ಗಡೆ, ಬಿ.ಎಚ್.ತೆಲಸಂಗ, ಪಿ.ಟಿ.ರಾಠೋಡ, ಆರ್.ಸಿ.ಕಾಂಬಳೆ ಇತರರಿದ್ದರು.