ಕೊಕಟನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಶಶಿಕಾಂತ ಪಡಸಲಗಿ ಗುರೂಜಿ ಉದ್ಘಾಟಿಸಿದರು. ಸಿದ್ದಪ್ಪ ಮುದಕಣ್ಣವರ, ರಾಜಕುಮಾರ ಜಂಬಗಿ, ಮುಬಾರಕ್ ತಾಂಬೋಳಿ, ದಶರಥ ನಾಯಿಕ, ಬಾಬು ಜತ್ತಿ, ಗುರು ಮದನ್ನವರ, ಜಯಪಾಲ ಪಾಲಬಾವಿ ಇತರರಿದ್ದರು.
- ರೈತ ಹೋರಾಟಗಾರರ ಸತ್ಕಾರ ಸಮಾರಂಭ
- ಹಸಿರುಸೇನೆ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ ಅನಿಸಿಕೆ
ಅಥಣಿ ಗ್ರಾಮೀಣ: ರೈತನಿಲ್ಲದ ಜೀವ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡದಿದ್ದರೆ ತಿನ್ನುವ ಅನ್ನಕ್ಕೂ ಪರಿತಪಿಸುವ ಕಾಲ ಬರುವುದರಲ್ಲಿ ಸಂಶಯವಿಲ್ಲ ಎಂದು ರೈತಸಂಘ ಹಾಗೂ ಹಸಿರುಸೇನೆ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಗುರೂಜಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರವಚನ ಕಾರ್ಯಕ್ರಮದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರೈತ ಹೋರಾಟಗಾರರ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅನ್ನ ಕೊಡುವ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕಿದೆ. ರೈತರಿಗೆ ಗೌರವ ಕೊಡಬೇಕು ಎಂದರು.
ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿ, ರೈತಶಕ್ತಿ ಎದುರು ಯಾವ ಸರ್ಕಾರವೂ ನಿಲ್ಲಲು ಸಾಧ್ಯವಿಲ್ಲ. ರೈತರು ಒಗ್ಗಟ್ಟಾಗಿ ಏನನ್ನಾದರೂ ಸಾಧಿಸಬಹುದು ಎಂದರು.
ರೈತಸಂಘದ ಸಂಚಾಲಕ ರಾಜಕುಮಾರ ಜಂಬಗಿ, ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ ಪೂಜಾರಿ, ತಾಲೂಕು ಅಧ್ಯಕ್ಷ ಮುಬಾರಕ್ ತಾಂಬೋಳಿ, ತಾಲೂಕು ಉಪಾಧ್ಯಕ್ಷ ದಶರಥ ನಾಯಿಕ, ಬಾಬು ಜತ್ತಿ, ಗುರು ಮದನ್ನವರ, ಜಯಪಾಲ ಪಾಲಬಾವಿ, ಮುಖಂಡರಾದ ವಿಶಾಲ ದೇಸಾಯಿ, ಮಹಾವೀರ ಹಳಕಿ, ಮುತ್ತಪ್ಪ ಕಾಡದೇವರಮಠ, ಗುರುನಾಥಶಾಸ್ತ್ರಿ, ಶಿವಲಿಂಗಯ್ಯ ಹಿರೇಮಠ, ಸುಭಾಷ ಮಾದರ, ರಾವಸಾಬ್ ಜಗತಾಪ ಇತರರಿದ್ದರು.