ಅಂಕಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ರುದ್ರಾವಧೂತ ಮಠದ ವಾರ್ಷಿಕ ಕಾರ್ಯಕ್ರಮವನ್ನು ಜಮಖಂಡಿಯ ಸಹಜಾನಂದ ಸ್ವಾಮೀಜಿ ಉದ್ಘಾಟಿಸಿದರು. ಕೃಷ್ಣಾನಂದ ಅವಧೂತರು ಇತರರು ಪಾಲ್ಗೊಂಡಿದ್ದರು. 
ಬೆಳಗಾವಿ

ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯಲಿ

ಮಾಂಜರಿ: ದೇಶವನ್ನು ಧಾರ್ಮಿಕ ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಕಟ್ಟಲಾಗಿದೆ. ಹಾಗಾಗಿ ಯುವಕರು ಸಂಸ್ಕಾರವಂತರಾಗಿ ಬೆಳೆದು ದೇಶದ ಪರಂಪರೆ ಉಳಿಸಬೇಕು ಎಂದು ಜಮಖಂಡಿಯ ಸಹಜಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ರುದ್ರಾವಧೂತ ಮಠದ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕಾರದ ಕೊರತೆಯಿಂದಾಗಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಧಾರ್ಮಿಕ ಚಿಂತನೆ ಕಾರ್ಯಕ್ರಮಗಳಿಂದ ಯುವಕರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯ ಎಂದರು.
ಜಮಖಂಡಿಯ ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ ಗುರುಸೇವೆ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕೆಂದು ತಿಳಿಸಿದರು. 
ಈರಪ್ಪ ಮಾಳಿಗೆ, ತುಕಾರಾಂ ಕುರಣೆ, ಅನಿಲ ಬಡಿಗೇರ, ಬಾಳು ಕುರೆ, ಚಂದ್ರಕಾಂತ ಕುರೆ, ಅಮರ ನಡುಮನಿ, ಪಿಂಟು ಮಾಳಗೆ, ರಾಕೇಶ ತಳಕೇರಿ, ಗಜಾನನ ವಗ್ಗೆ, ಸುಕುಮಾರ ಚಲವಾದಿ, ವಿಶ್ವನಾಥ ಘಟ್ಟೆ ಇತರರಿದ್ದರು.