ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಗುರುವಾರ ದೇಶದ ಮಿಲಿಟರಿ ಶಾಲೆಗಳ ಪ್ರಾಚಾರ್ಯರ ಸಭೆಯಲ್ಲಿ ಲೆಫ್ಟಿನೆಂಟ್ ಜನರಲ್ ಅಜಯ ರಾಮದೇವ ಮತ್ತು ಮೇಜರ ಜನರಲ್ ವಿ.ಕೆ.ಭಟ್ ಇದ್ದರು.
ಬೆಳಗಾವಿ: ನಗರದ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ಮಿಲಿಟರಿ ಶಾಲೆಗಳ (ಆರ್‌ಎಂಎಸ್) ಪ್ರಾಚಾರ್ಯರ ವಾರ್ಷಿಕ ಸಮ್ಮೇಳನ ಜರುಗಿತು.
ಮಿಲಿಟರಿ ಶಾಲೆಗಳ ಅತ್ಯುತ್ತಮ ಕಾರ್ಯನಿರ್ವಹಣೆ, ಕಾರ್ಯತಂತ್ರದ ಬೆಳವಣಿಗೆಗೆ ಸಂಬಂಧಿಸಿದ ವಿವಿಧ ನಿರ್ಣಾಯಕ ವಿಷಯಗಳನ್ನು ಇಂಟಿಗ್ರೇಟೆಡ್ ಟ್ರೈನಿಂಗ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಜಯ ರಾಮದೇವ, ಸೇನಾ ಶಿಕ್ಷಣದ ಹೆಚ್ಚುವರಿ ಮಹಾನಿರ್ದೇಶಕ ಮೇಜರ್ ಜನರಲ್ ವಿ.ಕೆ.ಭಟ್ ನೇತೃತ್ವದಲ್ಲಿ ಚರ್ಚಿಸಲಾಯಿತು.
ಸಿಬಿಎಸ್‌ಇ ಮತ್ತು ಎನ್‌ಡಿಎ ಫಲಿತಾಂಶ ಹೆಚ್ಚಳ, ಎಲ್ಲ ವಿಭಾಗಗಳಲ್ಲಿ ಬಾಲಕಿಯರ
ಕೆಡೆಟ್‌ಗಳ ಬೆಳವಣಿಗೆ ಪ್ರೋತ್ಸಾಹಿಸುವುದು, ಶಾಲೆಗಳಿಗೆ ಅಗತ್ಯವಿರುವ ಅತ್ಯಾಧುನಿಕ ಮೂಲ ಸೌಕರ್ಯ ಒದಗಿಸುವುದು, ಪಠ್ಯಕ್ರಮ ಪರಿಷ್ಕರಣೆ, ಸಮಗ್ರ ಶಿಕ್ಷಣಕ್ಕೆ ಬದ್ಧವಾಗಿರುವ ಐದು ರಾಷ್ಟ್ರೀಯ ಮಿಲಿಟರಿ ಶಾಲೆಗಳನ್ನು ಅವುಗಳ ಪ್ರಾಂಶುಪಾಲರು ಪ್ರತಿನಿಧಿಸುವುದು ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.