ಜಿಲ್ಲೆ

ಜೂ. 7ರಂದು ಬೆಳಗಾವಿ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

Belagavi

ಬೆಳಗಾವಿ: ಯುಜಿ ಕೇಬಲ್ ಅಳವಡಿಕೆ ಹಾಗೂ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಬೆಳಗಾವಿ ತಾಲೂಕಿನ ಬಳಗಾಮಟ್ಟಿ, ಕುಟ್ಟಲವಾಡಿ, ಬಾಮನವಾಡಿ, ನಾವಗೆ, ಜಾನೇವಾಡಿ, ಬಾದರವಾಡಿ, ರಣಕುಂಡೆ, ಕರ್ಲೇ, ಕಿನಯೇ, ಸಂತಿ ಬಸ್ತವಾಡ, ಕಾಳೇನಟ್ಟಿ, ವಾಘವಾಡೆ, ರಂಗಧೋಳಿ, ಮಾರ್ಕಂಡೇಯ ನಗರ, ವಾಲ್ಮೀಕಿ ನಗರ, ತೀರ್ಥಕುಂಡೆ, ಹುಂಚ್ಯಾನಟ್ಟಿ, ಅಶೋಕ ಐರನ್ ಕಾಲನಿ, ನಾವಗೆ ಔದ್ಯೋಗಿಕ ಕ್ಷೇತ್ರದಲ್ಲಿ ಜೂ. 7ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತುರ್ತು ನಿರ್ವಹಣೆ ಕಾಮಗಾರಿ ನಿಮಿತ್ತ ಹಿರೇಬಾಗೇವಾಡಿ ಉಪ ಕೇಂದ್ರದಿಂದ ಸರಬರಾಜು ಆಗುವ ಮುತ್ನಾಳ, ವಿರಪನಕೊಪ್ಪ, ಅರಳಿಕಟ್ಟಿ, ಬಸಾಪುರ, ಹಿರೇಬಾಗೇವಾಡಿ, ಭೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ.ಕೆ. ಕೊಪ್ಪ, ಹಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ, ಬಡಸ, ನಂದಿಹಳ್ಳಿ ಹಾಗೂ ಕುಕಡೊಳ್ಳಿ ಗ್ರಾಮದಲ್ಲಿ ಜೂ. 7ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.