ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಳಗಾವಿ ತಂಡಕ್ಕೆ ಪಿ.ಬಿ.ದುಡಗುಂಟಿ, ಎಚ್.ಡಿ.ಕೋಳೇಕರ ಬಹುಮಾನ ವಿತರಿಸಿದರು. ರಾಘವೇಂದ್ರ ಅಣ್ವೇಕರ್, ರವಿ ಭಜಂತ್ರಿ ಇದ್ದರು. 
ಜಿಲ್ಲೆ

ಬೆಳಗಾವಿ ತಂಡಕ್ಕೆ ಪ್ರಥಮ ಸ್ಥಾನ

ಬೆಳಗಾವಿ: ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪುರುಷರ ಮುಕ್ತ ವಿಭಾಗದ ‘ಸ್ವೀಪ್ ಕಪ್’ ವಾಲಿಬಾಲ್ ಟೂರ್ನಿಯಲ್ಲಿ ಬೆಳಗಾವಿ ತಂಡ ಪ್ರಥಮ ಸ್ಥಾನ ಗಳಿಸಿತು.

ಭೆಂಡವಾಡ, ಡಿವೈಎಸ್‌ಎಸ್ ತಂಡಗಳು ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಗಳಿಸಿದವು. ವಿಜೇತ ತಂಡಕ್ಕೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಪಿ.ಬಿ.ದುಡಗುಂಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಎಚ್.ಡಿ.ಕೋಳೇಕರ ಬಹುಮಾನ ವಿತರಿಸಿದರು. ಸ್ವೀಪ್ ಐಕಾನ್ ರಾಘವೇಂದ್ರ ಅಣ್ವೇಕರ್, ಬೆಳಗಾವಿ ನಗರ ಬಿಇಒ ರವಿ ಭಜಂತ್ರಿ, ರಾಜಕುಮಾರ ಪಾಟೀಲ, ಪಿ.ಪಿ.ದೇಶಪಾಂಡೆ, ಐ.ಡಿ. ಹಿರೇಮಠ, ಎ.ಪಿ.ಬಸನಾಳ, ಕಿರಣ ಗಣಾಚಾರಿ, ಎಂ.ಎಸ್.ದೇಶನೂರ, ಬಸವರಾಜ ಜಕ್ಕನ್ನವರ ಇತರರಿದ್ದರು. 14 ತಂಡಗಳು ಭಾಗವಹಿಸಿದ್ದವು.