ಜಿಲ್ಲೆ

ರೈಲಿಗೆ ತಲೆ ಕೊಟ್ಟು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ..!

ಬೆಳಗಾವಿ: ರಾಯಬಾಗ ರೈಲುನಿಲ್ದಾಣ ಬಳಿ ಒಂದೇ ಕುಟುಂಬ ನಾಲ್ವರು ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಬೀರಡಿ ಗ್ರಾಮದ ಸಾತಪ್ಪ ಸುತಾರ್(60), ಪತ್ನಿ ಮಹಾದೇವಿ(50) ಮಕ್ಕಳಾದ ದತ್ತಾತ್ರೇಯ (28), ಸಂತೋಷ (25) ಆತ್ಮಹತ್ಯೆ ಮಾಡಿಕೊಂಡವರು.

ವೃದ್ಧ ತಂದೆ, ತಾಯಿ, ಇಬ್ಬರು ಗಂಡು ಮಕ್ಕಳು ಬುಧವಾರ ರಾತ್ರಿ ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.

ರಾಯಬಾಗ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳ ರವಾನಿಸಲಾಗಿದ್ದು ವರದಿ ಬಳಿಕ ಗೊತ್ತಾಗಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.