ಬೆಳಗಾವಿ : ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ರಾಜ್ಯಾದ್ಯಂತ ಒಟ್ಟು 35 ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಬೆಳಗಾವಿ ನಗರ ಬಿಇಒ ವೈ.ಜೆ.ಭಜಂತ್ರಿ ಅವರನ್ನು ಖಾನಾಪುರಕ್ಕೆ ವರ್ಗಾಯಿಸಲಾಗಿದ್ದು,ಅವರಿಂದ ತೆರುವಾದ ಸ್ಥಾನಕ್ಕೆ ಬೆಳಗಾವಿ ಉಪನಿರ್ದೇಶಕರ ಕಚೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಅವರನ್ನು ಹಾಗೂ ಕಿತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ ಅವರನ್ನು ಬೆಳಗಾವಿ ಉಪನಿರ್ದೇಶಕರ ಕಚೇರಿಯ ಕ್ಷೇತ್ರ ಶಿಕ್ಷಣಾಧಿಕಾರಿಯನ್ನಾಗಿ ವರ್ಗಾಯಿಸಲಾಗಿದೆ.
ಕಲಬುರ್ಗಿಯ ಸಿಟಿಎ ಉಪನ್ಯಾಸಕಾರದ ಮಹಾದೇವಿ ಅಪ್ಪಾಜಿ ಅವರನ್ನು ನಿಪ್ಪಾಣಿ ತಾಲೂಕಿಗೆ, ಚಿಕ್ಕೋಡಿ ಡಿಡಿಪಿಐ ಕಚೇರಿಯ ಆರ್‌ಎಂಎಸ್‌ಎ ಜಿಲ್ಲಾ ಉಪ ಸಮನ್ವಯದಾಧಿಕಾರಿ ಭಗವಂತ ಮೇಕನಮರಡಿ ಅವರನ್ನು ಚಿಕ್ಕೋಡಿ ಡಿಡಿಪಿಐ ಕಚೇರಿಯ ಕ್ಷೇತ್ರ ಶಿಕ್ಷಣಾಧಿಕಾರಿಯನ್ನಾಗಿ ನಿಯೋಜಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಶನಿವಾರ ಆದೇಶಿಸಿದ್ದಾರೆ.