ಜಿಲ್ಲೆ

ಡಾ.ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಕೆ

Belagavi


ಬೈಲಹೊಂಗಲ: ಬೈಲಹೊಂಗಲ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನಾಮಪತ್ರ ಸಲ್ಲಿಸಿದರು.
ನಗರದಲ್ಲಿ ಅಪಾರ ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ‌ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡಾ.ವಿಶ್ವನಾಥ ಪಾಟೀಲ ಮಾತನಾಡಿದ ಅವರು, ಬಿಜೆಪಿ ಟಿಕೇಟ್ ಕೊನೆಗಳಿಗೆಯಲ್ಲಿ ಕೈ ತಪ್ಪಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಟಿಕೇಟ್ ನೀಡಿದ  ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ, ಮತದಾರರ, ಅಭಿಮಾನಿಗಳ ಒತ್ತಾಯದ ಮೇರೆಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪಧಿಸುತ್ತಿದ್ದೆನೆ. ಕ್ಷೇತ್ರದ ಜನತೆ ನನ್ನ ಕೈ ಹಿಡಿಯುವ ವಿಶ್ವಾಸವಿದ್ದು, ಜನತೆಯ ಆಶೀರ್ವಾದದಿಂದ ಆಯ್ಕೆಯಾಗಿ ಕ್ಷೇತ್ರವನ್ನು ಪ್ರಾಮಾಣಿಕವಾಗಿ, ಸಮಗ್ರವಾಗಿ ಅಭಿವೃದ್ದಿಪಡಿಸುವೆ ಎಂದರು.
ಅಮಿತ ವಿಶ್ವನಾಥ ಪಾಟೀಲ, ಮಡಿವಾಳಪ್ಪ ಚಳಕೊಪ್ಪ, ಮಡಿವಾಳಪ್ಪ ಹೋಟಿ, ದುಂಡೇಶ ಗರಗದ, ವಿರೇಂದ್ರ ಸಂಗೊಳ್ಳಿ, ಪ್ರಭಾಕರ ಭಜಂತ್ರಿ, ಈರಣ್ಣ ಮುರಗೋಡ, ಮಡಿವಾಳಪ್ಪ ಚಿಕ್ಕೋಪ್ಪ, ಶ್ರೀಶೈಲ ಬೈಲವಾಡ, ಸಿದ್ಧಾರೂಢ ಹೊಂಡಪ್ಪನವರ, ಎಂ.ಎಲ್.ಅಲ್ಲಯ್ಯನವರಮಠ, ವಿ.ಸಿ. ಪೂಜೇರ, ರಿತೇಶ ಪಾಟೀಲ ಹಾಗೂ ಕಾರ್ಯಕರ್ತರು ಇದ್ದರು.