ಜಿಲ್ಲೆ

ಚಲಿಸುತ್ತಿದ್ದ ರೈಲಿನಿಂದ ಬಿದ್ದ ವೃದ್ಧನ ರಕ್ಷಿಸಿದ RPF ಸಿಬ್ಬಂದಿ

ಬೆಳಗಾವಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ ರೈಲಿನಿಂದ ಬಿದ್ದ ವೃದ್ಧರೊಬ್ಬರನ್ನು  ಕ್ಷಣಾರ್ಧದಲ್ಲಿ RPF ಸಿಬ್ಬಂದಿ ರಕ್ಷಿಸಿದ ಘಟನೆ ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆದಿದೆ. 
ಬೆಳಗಾವಿ ತಾಲೂಕಿನ ಉಚ್ಚಗಾಂವ ಸಮೀಪದ ಬಸುರತೆ ಗ್ರಾಮದ ಭರಮಾ ಗಂಗರಾಮ ಕುಂಬಾರ (55) ಎಂಬುವರು ಬೆಳಗಾವಿಯಿಂದ ಪುಣೆಗೆ ತೆರಳುತ್ತಿದ್ದ ಮೊಮ್ಮನನ್ನು  ಮೈಸೂರು–ಅಜ್ಮೀರ್ ಎಕ್ಸ್‌ಪ್ರೆಸ್ ರೈಲಿಗೆ  ಬೀಳ್ಕೊಡಲು ಬಂದಿದ್ದರು.
ರೈಲಿನಲ್ಲಿ ಹತ್ತಿ ಮೊಮ್ಮಗನನ್ನು ಬೀಳ್ಕೊಡುವಾಗ ಆಗ ರೈಲು ಚಲಿಸಲು ಪ್ರಾರಂಭಸಿದೆ,  ಆಗ ಇಳಿಯಲು ಯತ್ನಿಸಿದಾಗ ಭರಮಾ ಜಾರಿಬಿದ್ದು,  ಪ್ಲಾಟ ಫಾರ್ಮ್ ಹಾಗೂ ರೈಲಿನ ನಡುವಿನ ಚಿಕ್ಕ ಜಾಗದಲ್ಲಿ ಸಿಲುಕಿಕೊಡಿದರು. ಇದನ್ನು ಕರ್ತವ್ಯ ನಿರತ  RPF ಹೆಡ್ ಕಾನ್ಸ್ಟೇಬಲ್ ಸಿ‌.ಐ.ಕೊಪ್ಪದ ಗಮನಿಸಿ ತಕ್ಷಣ, ಧೈರ್ಯದಿಂದ ಮುನ್ನುಗಿ ಸಿಲುಕುತ್ತಿದ್ದ ಭರಮಾರನ್ನು ರಕ್ಷಿಸಿದರು. ನಂತರ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಈ ರಕ್ಷಣೆಯ ದೃಶ್ಯ ರೈಲು ನಿಲ್ದಾಣದಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.