ಕೋಲಾರ; ಜಿಲ್ಲಾ ಕಾಂಗ್ರೆಸ್ನ ವಿವಿಧ ಟಕಗಳ ಸಂಟನಾ ಸಭೆಯಲ್ಲಿ ನಡೆದ ಗಲಾಟೆ ಸಂಬಂಧ ಅಶಿಸ್ತು ತೋರಿರುವ ಹಲವರನ್ನು ಉಚ್ಚಾಟನೆ ಮಾಡಲಾಗಿದೆ.
ಪಕ್ಷದ ಸಭೆಗಳಲ್ಲಿ ಅಶಿಸ್ತು ತೋರಿರುವ ಆರೋಪದಡಿ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಕುಮಾರ್, ನಗರಸಭೆ ಸದಸ್ಯ ಅಂಬರೀಶ್, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿಗೌಡ, ಕಾರ್ಯಕರ್ತ ಉರಟಿ ಅಗ್ರಹಾರ ಚೌಡರೆಡ್ಡಿ ಸೇರಿ ಹಲವರ ತಲೆದಂಡವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷದ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ಕುಮಾರ್ ಸಮ್ಮುಖದಲ್ಲೇ ಗಲಾಟೆ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಕೆಲವರು ಪೂರ್ವ ನಿಯೋಜಿತವಾಗಿಯೇ ಸಭೆಯಲ್ಲಿ ಗದ್ದಲ ಮಾಡಿ ಮೊದಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು ಅವರನ್ನು ವೇದಿಕೆಯಿಂದ ಹೊರ ಹಾಕಿದರು. ಆನಂತರ ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ ಅವರನ್ನು ವೇದಿಕೆಯಿಂದ ಕೆಳಗೆ ತಳ್ಳಿ ದರ್ಪ ತೋರಿದ್ದರು. ಇದರಿಂದ ಇಬ್ಬರೂ ಅಸಮಾಧಾನಗೊಂಡಿದ್ದರು. ಈ ಟನೆಯು ಎರಡು ಗುಂಪುಗಳ ನಡುವಿನ ಆರೋಪ&ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಅಶಿಸ್ತು ತೋರಿದವರ ವಿರುದ್ಧ ಕ್ರಮ
ಅಶಿಸ್ತು ತೋರಿರುವವರನ್ನು ಪಕ್ಷದಿಂದ ಹೊರಗೆ ಹಾಕಿ, ಕ್ರಿಯಾಶೀಲರನ್ನು ಸೇರಿಸಿಕೊಂಡು ಕಾಂಗ್ರೆಸ್ ಬಲವರ್ಧನೆ ಮಾಡುತ್ತೇವೆ ಎಂದು ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಏಕಾಏಕಿಯಾಗಿ ಬಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು ಅವರನ್ನು ವೇದಿಕೆಯಿಂದ ಹೊರ ಹಾಕುತ್ತಾರೆ, ಏಕೆ ಹೀಗಾಯಿತು ಎಂದು ನನಗೂ ಸೋಜಿಗವಾಯಿತು, ಆ ಸಂದರ್ಭದಲ್ಲಿ ಮೂಕ ಪ್ರೇಕ್ಷಕನಾದೆ, ವಾಸು, ಇತರರು ನನ್ನ ಶರ್ಟ್ ಹರಿದು ಗೂಂಡಾವರ್ತನೆ ತೋರಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಗಲಾಟೆ ಮಾಡಿರುವವರೇ ಹಿಂದೆ ಕಾಂಗ್ರೆಸ್ ಭವನದಲ್ಲಿ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದು, ಅದರಲ್ಲು ಶಿವಕುಮಾರ್ ಸಹ ಇದ್ದಾರೆ. ಆದರೆ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷನಾಗಿ ಶಿವಕುಮಾರ್ನನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲಾಧ್ಯಕ್ಷನ ಗಮನಕ್ಕೆ ತರದೆ ನೇಮಕ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಗರಸಭೆ ಸದಸ್ಯ ಅಂಬರೀಶ್ ಪ್ರೇರಣೆಯಿಂದಲೇ ಕಾರಿನ ಚಾಲಕ ವಾಸು ಸೇರಿ ಪಕ್ಷದ ಸದಸ್ಯರಲ್ಲದವರು ಸಹ ಅತಿಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಪೈಕಿ ಶೇ.90 ಪಕ್ಷದಲ್ಲಿ ಇಲ್ಲ, ಅವರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳಲಿದ್ದಾರೆ. ಈ ವಿಷಯ ಗೃಹ ಸಚಿವರ ಗಮನಕ್ಕೂ ಹೋಗಿದೆ ಎಂದರು.
ಎಂಎಲ್ಸಿ ಮುಖ್ಯ ರೂವಾರಿ
ಜಿಲ್ಲಾಧ್ಯಕ್ಷ ಎಂದರೆ ಪಕ್ಷಕ್ಕೆ ತಾಯಿ&ತಂದೆ ಸಮಾನ. ಸಹ ಕಾರ್ಯಕರ್ತರು ದೂಂಡಾವರ್ತನೆ ಮಾಡಿದ್ದಾರೆ. ಎಂಎಲ್ಸಿ ಅನಿಲ್ ಕುಮಾರ್ ಸರ್ಕಾರದ ಭಾಗ ಆಗಿದ್ದು, ನಾನು ಸಹ ಮತ ನೀಡಿದ್ದೇನೆ. ನನ್ನ ವಿರುದ್ಧ ಮಾತನಾಡುತ್ತಾರೆ ಎಂದರೆ ಏನರ್ಥ, ಇದಕ್ಕೆ ಮುಖ್ಯ ಪ್ರೇರಣೆ ಅನಿಲ್ಕುಮಾರ್ ಅವರೇ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಸ್ತುವಾರಿ ಜಿ.ಸಿ.ಚಂದ್ರಶೇಖರ್ ವರದಿ ತರಿಸಿಕೊಂಡು ಇವರ ರಾಜಕೀಯ ಹಣೆ ಬರಹವನ್ನು ಬರೆಯಲಿದ್ದಾರೆ. ಶಾಸಕರು ಇಂತಹ ಟನೆಗಳು ಮುಂದುವರಿಯುತ್ತಲೇ ಇರುತ್ತವೆ ಎಂದು ಹೇಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.