ಗುಂಡ್ಲುಪೇಟೆ: ತಾಲೂಕಿನ ಬೇಗೂರಿನಲ್ಲಿ ಶುಕ್ರವಾರ ಸಂಜೆ ಜೋರು ಮಳೆ ಸುರಿಯಿತು. ರಸ್ತೆಗೆ ಮಳೆ ನೀರು ಹರಿಯಿತು. ಸಂಚಾರಿಸುತ್ತಿದ್ದ ವಾಹನಗಳಿಗೆ ತೊಂದರೆ ಉಂಟಾಯಿತು. ಬೇಸಿಗೆಯಿಂದ ಕಂಗೆಟ್ಟಿದ್ದ ಬೇಗೂರು ತಂಪಾಯಿತು. ಸಾಧಾರಣ ಮಳೆಯನ್ನಷ್ಟೇ ಕಂಡಿದ್ದ ಬೇಗೂರು ಜನರು ಅಬ್ಬರದ ಮಳೆಯನ್ನು ಕಂಡು ಅಚ್ಚರಿ ಪಟ್ಟರು.