ಜಿಲ್ಲೆ

ವಿವಿ ಮುಚ್ಚದಂತೆ ಭಿಕ್ಷಾಟನೆ ಮಾಡಿ ಆಕ್ರೋಶ

ಜಗದೀಶ ಹೊಂಬಳಿ

ಬೆಳಗಾವಿ: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ಎದುರು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟಿಸಲಾಯಿತು.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಬಳಿಕೆ ಸಚಿವರ ನಿವಾಸದ ಎದುರು ತೆರಳಿದ ಪ್ರತಿಭಟನಾಕಾರರು ಸಚಿವರು ಬಂದು ಮನವಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಚಿವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಹೆಬ್ಬಾಳ್ಕರ್ ಸರ್ಕಾರಿ ಆಪ್ತ ಸಾಹಾಯಕ ಬಂದು ಪ್ರತಿಭಟನಾಕಾರರ ಮನವೋಲಿಸಿ ಮನವಿ ಸ್ವೀಕರಿಸಿದರು. ಕುಶಲ್ ಘೋಡಗೇರಿ, ರೋಹಿತ್ ಅಳಕುಂಟೆ, ಸಚಿನ್ ಹಿರೇಮಠ ಇತರರಿದ್ದರು.