ಶಿವಮೊಗ್ಗ: ನಾಡು, ನುಡಿ, ಜಲದ ವಿಷಯದಲ್ಲಿ ಜೆಡಿಎಸ್ ಎಂದೂ ರಾಜಿ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರಗಳಿದ್ದಾಗ ತಮಿಳುನಾಡಿಗೆ ನೀರು ಬಿಡಲು ಅಷ್ಟು ಸುಲಭವಾಗಿ ಎಂದೂ ಒಪ್ಪಿರಲಿಲ್ಲ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ರಾಷ್ಟಿçÃಯ ಪಕ್ಷಗಳಿಗೆ ರಾಜಕೀಯ ಲೆಕ್ಕಾಚಾರ, ಮೇಲಿನವರ ಮರ್ಜಿ ಇರುತ್ತದೆ. ಪ್ರಾದೇಶಿಕ ಪಕ್ಷಗಳಿಗೆ ಇಂತಹ ಕಠಿಣ ಚೌಕಟ್ಟು ಇರುವುದಿಲ್ಲ. ನಮ್ಮ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ಕೂಡ ಕಾವೇರಿ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ಗುರುವಾರ ಸುದ್ದಿಗಾರರಿಂದ ತಿಳಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ನವರಿಗೆ ಅದೇನೋ ಮರ್ಜಿಯಿದ್ದಂತೆ ಕಾಣಿಸುತ್ತದೆ. ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ರಾಜ್ಯದ ರೈತರ ಹಿತವನ್ನು ನೋಡುತ್ತಿಲ್ಲ. ವಿಪರ್ಯಾಸ ಎಂದರೆ ಸಿದ್ದರಾಮಯ್ಯ ಜನತಾ ಪರಿವಾರದಲ್ಲಿದ್ದಾಗ ಕಾವೇರಿ ನೀರು ಹರಿಸುವುದನ್ನು ಅತ್ಯಂತ ಪ್ರಬಲವಾಗಿ ವಿರೋಽಸಿದ್ದರು. ಈಗ ಅದನ್ನು ಅವರು ನೆನಪಿಸಿಕೊಳ್ಳಬೇಕು ಎಂದರು.
ಮೈತ್ರಿ ಧರ್ಮ ಎನ್ನುವುದು ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಮೈತ್ರಿ ಮಾತುಕತೆ ನಡೆದಿದೆ. ಎಚ್‌ಡಿಕೆ ಬಿಜೆಪಿಯ ದೆಹಲಿ ನಾಯಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಮೈತ್ರಿ ಅಂತಿಮವಾಗಲಿದೆ ಎಂದು ವೈಎಸ್‌ವಿ ದತ್ತ ಹೇಳಿದರು.
ಇಂದು ಯಾವ ರಾಜಕೀಯ ಪಕ್ಷಗಳಲ್ಲೂ ಸಿದ್ಧಾಂತಗಳು ಉಳಿದುಕೊಂಡಿಲ್ಲ. ಅವಕಾಶವಾದಿ ರಾಜಕಾರಣ ವಿಜೃಂಭಿಸುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಜತೆಗಿನ ಹೊಂದಾಣಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.