ಕೊಳವಿ: ಸಮೀಪದ ಮಮದಾಪುರ ಗ್ರಾಮದಲ್ಲಿ ಮಾ.8 ರಿಂದ 10ರ ವರೆಗೆ ಶ್ರೀ ಬೀರಸಿದ್ದೇಶ್ವರ ಜಾತ್ರೆ ಜರುಗಲಿದೆ. ಮಾ.8ರಂದು ಬೆಳಗ್ಗೆ 8 ಗಂಟೆಗೆ ಅಂಬಲಿ ಬಿಂದಿಗೆ ಹಾಗೂ ಆರತಿಯೊಂದಿಗೆ ಮೆರವಣಿಗೆ ನಡೆಯಲಿದೆ. ಸಂಜೆ ವಿವಿಧ ಗ್ರಾಮಗಳ ದೇವರ ಪಲ್ಲಕ್ಕಿಗಳ ಆಗಮನ, ವಾಲಗ ಹಾಗೂ ಡೊಳ್ಳಿನ ಪದ ಜರುಗಲಿದೆ. ಮಾ.9ರಂದು ಬೆಳಗ್ಗೆ ಬೀರಸಿದ್ದೇಶ್ವರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಅಲಂಕಾರ ಜರುಗಲಿದೆ. ಉಡಿ ತುಂಬುವ ಕಾರ್ಯಕ್ರಮ, ಹಾಗೂ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಎತ್ತಿನ ತೆರೆಬಂಡಿ ಸ್ಪರ್ಧೆ ಜರುಗಲಿದೆ. ಅನ್ನ ಸಂತರ್ಪಣೆ ಹಾಗೂ ರಾತ್ರಿ 10ಕ್ಕೆ ಭಂಡಾರದ ಮಹಿಮೆ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.10 ರಂದು ಭಂಡಾರ ಒಡೆಯುವುದು. ತೆರೆ ಬಂಡಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಲಿಯಲಿದೆ. ಚರಮೂರ್ತಿಶ್ವರ ಸ್ವಾಮೀಜಿ, ರೇವಣಸಿದ್ದಯ್ಯ ಗುರುಗಳು, ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ, ಬನಸಿದ್ದೇಶ್ವರ ಮಹಾರಾಜರು, ಹಣಮಾಪುರ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಸಹಿಸುವರು. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.