ಜಿಲ್ಲೆ

ಬೀರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಸಮೀಪದ ಕಡತನಾಳ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನೆಯನ್ನು ಅರಬಾವಿ ದುರದುಂಡೇಶ್ವರ ಸಿದ್ದ ಸಂಸ್ಥಾನ ಮಠದ ಗುರುಬಸವಲಿಂಗ ಸ್ವಾಮೀಜಿ ಹಾಗೂ ಮನಸೂರಿನ ರೇವಣಸಿದ್ದೇಶ್ವರ ಮಹಾಮಠದ ಡಾ.ಬಸವರಾಜ ದೇವರು, ಶಾಸಕ ಬಾಬಾಸಾಹೇಬ ಪಾಟೀಲ ನೆರವೇರಿಸಿದರು. ನೂತನ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪಣೆ ಜರುಗಿತು.

ಉದ್ಘಾಟನೆ ನಿಮಿತ್ತ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಸಾಧಕರನ್ನು ಸನ್ಮಾನಿಸಲಾಯಿತು. ವಿಶೇಷ ಪೂಜೆ ಹೊನ್ನಾಟ ನಡೆಯಿತು.

ವೇದಮೂರ್ತಿ ಮಹಾಂತಯ್ಯ ಹಿರೇಮಠ, ಸೊಗಲದ ಶಿವಸ್ವಾಮಿ, ಅವರಾದಿ ಉಳವಯ್ಯ ಹಿರೇಮಠ ಸ್ವಾಮೀಜಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಜಿಪಂ ಮಾಜಿ ಉಪಾಧ್ಯಕ್ಷ ಚನ್ನಬಸಪ್ಪ ಮೊಖಾಶಿ, ಸಮಾಜ ಸೇವಕ ಹಬೀಬ್ ಶಿಲ್ಲೇದಾರ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಶೇಖಪ್ಪ ಯರಗೊಪ್ಪ, ರಾಣಿ ಶುಗರ್ಸ್ ಮಾಜಿ ನಿರ್ದೇಶಕ ರುದ್ರಪ್ಪ ಅಂಗಡಿ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ಸಂಗೊಳ್ಳಿ, ಚನ್ನಮ್ಮ ಕಿತ್ತೂರಿನ ಪಿಎಸ್‌ಐ ಪ್ರವೀಣ ಗಂಗೋಳ ಇತರರಿದ್ದರು.