ಜಿಲ್ಲೆ

ಬೀರಲಿಂಗೇಶ್ವರ ಜಾತ್ರೆ ಅದ್ದೂರಿ

ಪ್ರಶಾಂತ ಹೂಗಾರ

ಐಗಳಿ: ಸ್ಥಳೀಯ ಬೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಬೀರಲಿಂಗೇಶ್ವರ ದೇವಸ್ಥಾನದ ಸಿಂಗಾರ, ಪೂಜೆ ಹಾಗೂ ಹಲವಾರು ಗ್ರಾಮಗಳ ಡೊಳ್ಳಿನ ಸಂಘಗಳಿಂದ ಡೊಳ್ಳಿನ ವಾಲಗ ಜರುಗಿತು.

ಭಾನುವಾರ ವಿಶೇಷ ಪೂಜೆ, ನೈವೇದ್ಯ ಹಾಗೂ ಅನ್ನಪ್ರಸಾದ, ಸಂಜೆ ಸುಮಂಗಲೆಯರ ಆರತಿ, ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವ, ರಾತ್ರಿ ಡೊಳ್ಳಿನ ಗಾಯನ ಸ್ಪರ್ಧೆ ನಡೆಯಿತು.

ವೀರೇಶ ಪಟ್ಟಣಖೋಡಿ, ಮಲ್ಲಪ್ಪ ಬೇವಿನಗಿಡದ, ಸಂಗಪ್ಪ ಕರಿಗಾರ, ನೀಲಪ್ಪ ಬಾಡಗಿ, ಡಾ.ಸುರೇಶ ಸನದಿ, ಶಿವಾನಂದ ಸನದಿ, ರಮೇಶ ಹುಣಶೀಕಟ್ಟಿ, ಬೀರಪ್ಪ ಕರಿಗಾರ, ಬೀರಪ್ಪ ಬಾಡಗಿ, ಅಶೋಕ ಸನದಿ, ಸಿದ್ದಪ್ಪ ಸನದಿ, ಸೋಮಣ್ಣ ಬಂಡರಬಟ್ಟಿ, ವಿರೇಶ ಹುಣಶೀಕಟ್ಟಿ, ಅಪ್ಪಾರಾಯ ಗೌಡನವರ, ಪರಶುರಾಮ ಹುಣಶೀಕಟ್ಟಿ ಇತರರು ಇದ್ದರು.