ಬೀಳಗಿ: ಸರ್ಕಾರ ಡಿ.ಇಡಿ. ಹಾಗೂ ಪದವಿ ಪಡೆದ ಅನುಭವಿ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕಿಸುವ ಮೂಲಕ ದಿಟ್ಟ ಹೆಜ್ಜೆ ಇಡುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.
ತಾಲೂಕಿನ ಬಾದರದಿನ್ನಿ-ಯತ್ನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಥಮಿಕ ಶಾಲೆಯಲ್ಲಿ ಬುಧವಾರ ಬಿಯೂಟ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರಲ್ಲಿ ಖಾಸಗಿ ಶಾಲೆ ಮೇಲಿನ ವ್ಯಾಮೋಹ ಮತ್ತು ಸರ್ಕಾರಿ ಶಾಲೆ ಮೇಲಿನ ನಿರಾಸಕ್ತಿ ಹೋಗಲಾಡಿಸಿ ಮತ್ತೆ ಸರ್ಕಾರಿ ಶಾಲೆಗಳತ್ತ ಮಕ್ಕಳು ಮುಖ ಮಾಡುವಂತೆ ಆಯಾ ಗ್ರಾಮಸ್ಥರು ಹಾಗೂ ಪಾಲಕರು, ಶಿಕ್ಷಕರು ಮಾಡಬೇಕಾಗಿದೆ. ಎಲ್ಲ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಬೇಕು ಎಂದರು.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಆರೋಗ್ಯವಾಗಿ ಇರಬೇಕು ಎಂಬ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ, ಹಾಲು, ಸೈಕಲ್, ಸಮವಸ, ಪಠ್ಯಪುಸ್ತಕ, ಶಿಷ್ಯವೇತನ ಹಾಗೂ ಇನ್ನು ಅನೇಕ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಮಕ್ಕಳು ಹಾಗೂ ಪಾಲಕರು ಅದರ ಲಾಭ ಪಡೆದುಕೊಳ್ಳಬೇಕು. ಇಂಥ ಶಾಲೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪಿಂಕ್ ಮಾದರಿ ಶೌಚಗೃಹ ಸೌಲಭ್ಯಗಳು ನೀಡಲಾಗುವುದು ಎಂದರು.
ಜಿಲ್ಲಾ ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿಕಾರಿ ಎನ್.ವೈ. ಕುಂದಗರಿ ಸರ್ಕಾರಿ ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಡಿಡಿಪಿಐ ಶ್ರೀಶೈಲ ಬಿರಾದಾರ, ಬಿಇಒ ಎಚ್.ಜಿ. ಮಿರ್ಜಿ, ತಾಪಂ ಇಒ ಎಂ.ಕೆ. ತೊದಲಬಾಗಿ, ಎಂ.ಎನ್. ಇಂಗಳೇಶ್ವರ, ಬಿಆರ್‌ಸಿ ಆರ್.ಸಿ. ವಡವಾಣಿ, ವಿಷಯ ಪರಿವೀಕ್ಷಕ ಡಿ.ಎಂ.ಯಾವಗಲ್ಲ, ಸಾಬನಗೌಡ ಗೌಡರ, ಬಿ.ಆರ್. ಸೊನ್ನದ, ಮುಖ್ಯಶಿಕ್ಷಕ ಎಂ.ಎಸ್. ವಾರ್ಡೆದ, ಪಿಡಿಒ ಜಿ.ಎಸ್. ಅರಳಿಕಟ್ಟಿ, ಎಸ್.ಎನ್.ಮುತ್ತಗಿ ಅನೇಕರು ಇದ್ದರು.
ಬೀಳಗಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಯಲ್ಲಿ ಓದು ಮಕ್ಕಳಿಗೆ ಪ್ರಾಯೋಗಿಕವಾಗಿ ಬಾಳೆಹಣ್ಣು ವಿತರಣೆ ಕಾರ್ಯಕ್ರಮಕ್ಕೆ ಜಿಪಂ ಸಿಇಒ ಮಾನಕರ ಚಾಲನೆ ನೀಡಿದರು. ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸವಿದರು.
ಮನವಿ ಸಲ್ಲಿಕೆ
ಕೆಲ ಗ್ರಾಪಂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗುತ್ತಿವೆ. ಅವುಗಳ ಬಗ್ಗೆ ನಿಗಾವಹಿಸಬೇಕೆಂದು ಸಾರ್ವಜನಿಕರು ಸಿಇಒಗೆ ಮನವಿ ಮಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೆ. ತೊದಲಬಾಗಿ ಮಾಧ್ಯಮದವರಿಗೆ ಸೂಕ್ತ ಮಾಹಿತಿ ನೀಡುವುದಿಲ್ಲ. ಫೋನ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು. ಈ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ ಮಾನಕರ ಹೇಳಿದರು.
EndFragment