ಜಿಲ್ಲೆ

ನೆಲಕ್ಕುರುಳಿದ ವಿದುತ್ ಕಂಬ

ಬೀಳಗಿ: ತಾಲೂಕಿನ ಕಾತರಕಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಸುರಿದ ಮಳೆ, ಗಾಳಿ ರಭಸಕ್ಕೆ 110 ಕೆ.ವಿ. ಕೆಪಿಟಿಸಿಎಲ್ ವಜ್ರಮಟ್ಟಿಯಿಂದ ಕಾತರಕಿಗೆ ವಿದ್ಯುತ್ ಸರಬರಾಜು ಮಾಡುವ ಡಬಲ್ ಸರ್ಕ್ಯೂಟ್ ಗೋಪುರ ನೆಲಕ್ಕೆ ಉರುಳಿದೆ.

ಇದರಿಂದ ಬೀಳಗಿ ತಾಲೂಕು ವ್ಯಾಪ್ತಿಯ ಕಾತರಕಿ, ಶಿರಗುಂಪಿ, ಬೀಳಗಿ, ಗಿರಿಸಾಗರ, ಬಿಸನಾಳ ಹಾಗೂ ತೋಳಮಟ್ಟಿ ಉಪ ಕೇಂದ್ರಗಳಿಗೆ ಸಂಪೂರ್ಣ ವಿದ್ಯುತ್ ಕಡಿತಗೊಂಡಿದೆ.

ಬೀಳಗಿ ಉಪವಿಭಾಗ ಎಇಇ ವಿಜಯಕುಮಾರ ಚವಾಣ್ ಸುದ್ದಿಗಾರರ ಜತೆ ಮಾತನಾಡಿ, ಸೋಮವಾರ ಬೆಳಗ್ಗೆಯಿಂದ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು, ಸಿಬ್ಬಂದಿ ತುರ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳವಾರ ಸಂಜೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದರು.

ತುರ್ತು ಕಾರ್ಯ ನಿರ್ವಹಣೆಯಲ್ಲಿ ಬಾಗಲಕೋಟೆ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಜಿ.ಎಸ್. ಹೆಬ್ಬಾಳ್ಕರ, ಕೆಪಿಟಿಸಿಎಲ್ ಜಿಲ್ಲಾ ಎಸಿ ಗುರುಲಿಂಗಪ್ಪ ಗೋಟ್ಯಾಳ, ಇಂಜಿನಿಯರ್ ಕೆ.ಜಿ. ಹಿರೇಮಠ, ಮುಧೋಳ ಇಇ ಗಂಗಾಧರ ಲೂಣಿ, ಮಹಾಲಿಂಗಪುರ ಮತ್ತು ಬಾಗಲಕೋಟೆ ಸಿಬ್ಬಂದಿ ಇದ್ದರು.

EndFragment