ಹಗರಿಬೊಮ್ಮನಹಳ್ಳಿ: ಜೇನು ಸಾಕಣೆಯಲ್ಲಿ ಕೃಷಿಯ ಅವಿಭಾಜ್ಯ ಅಂಗವಾಗಿ ರೂಢಿಸಿಕೊಳ್ಳಬೇಕು. ಇದು ಪರ್ಯಾಯ ಆದಾಯದ ಮೂಲವಾಗಿದೆ ಎಂದು ಗಂಗಾವತಿ ಕೃಷಿ ವಿದ್ಯಾಲಯದ ಪ್ರಾಧ್ಯಾಪಕ ಬದರಿಪ್ರಸಾದ್ ಹೇಳಿದರು.
ಇದನ್ನೂ ಓದಿ:ಜೇನು ಸಾಕಣೆಯಲ್ಲಿ ಹಣ ಗಳಿಸೋದು ಹೇಗೆ?
ಮಾಲವಿ ವಲಯ ಅರಣ್ಯ ನರ್ಸರಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಜೇನು ಸಾಕಣೆ ಮತ್ತು ಸಸ್ಯಗಳ ಪಾಲನೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಪಂ ಇಒ ಡಾ.ಜಿ.ಪರಮೇಶಪ್ಪ ಮಾತನಾಡಿ, ರೈತರು ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡಿರುತ್ತಾರೆ. ಕೃಷಿ ಜತೆ ಹೈನುಗಾರಿಕೆ, ಜೇನು, ಕೋಳಿ ಸಾಕಣೆ ಮಾಡಿದರೆ ನಿರೀಕ್ಷೆಯಂತೆ ಲಾಭ ಪಡೆಯಬಹುದು ಎಂದರು.
ದಾವಣಗೆರೆ ಕಾರ್ಡಿಯ ಸಂಸ್ಥೆ ಮುಖ್ಯಸ್ಥ ಸುದರ್ಶನ, ಗಂಗಾವತಿ ಕೃಷಿ ವಿದ್ಯಾಲಯದ ಸಂಶೋಧಕ ಗಂಗಪ್ಪ ನಾಯಕ, ಗ್ರಾಪಂ ಅಧ್ಯಕ್ಷೆ ಕೊಟ್ರಮ್ಮ ದುರ್ಗಪ್ಪ, ಪಿಡಿಒ ಶ್ರೀಕಾಂತ್ ನಾಯ್ಕ, ಸದಸ್ಯರಾದ ಕೊಟ್ಟಿಗಿ ನಾಗರಾಜ, ಪರಶುರಾಮ, ಹಸನ್ ಸಾಬ್, ಸಂಪನ್ಮೂಲ ವ್ಯಕ್ತಿ ಪೂಜಾರ್ ಸಿದ್ದಪ್ಪ, ಸಂಘದ ಅಧ್ಯಕ್ಷರಾದ ಸಿ.ಗಂಗಮ್ಮ, ಟಿ.ಅರುಣ್, ಹೊಸಪೇಟೆಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಎಂ.ನಾಗರಾಜ, ಉಪವಲಯ ಅರಣ್ಯಾಧಿಕಾರಿ ನಿಸರ್ ಅಹಮದ್, ವಲಯ ಅರಣ್ಯಾಧಿಕಾರಿ ಮಂಜು ನಾಯ್ಕ, ಅರಣ್ಯ ಗಸ್ತು ಪಾಲಕ ನಾಗರಾಜಯ್ಯ ಇದ್ದರು.