ಜಿಲ್ಲೆ

ಗೋಮಾಂಸ ಮಾರುತ್ತಿದ್ದವನ ಬಂಧನ

ಮಂಜುನಾಥ ತಿಮ್ಮಯ್ಯ

ಮೈಸೂರು: ಗೋಮಾಂಸ ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.


ಎನ್.ಆರ್.ಮೊಹಲ್ಲಾದ ಎ.ಜೆ.ಬ್ಲಾಕ್‌ನ ಸರ್ವರ್ ಎಂಬಾತನೇ ಬಂಧಿತ ಆರೋಪಿ. ಈತ ತನ್ನ ಮಾಂಸದ ಅಂಗಡಿಯಲ್ಲಿ ಗೋ ಮಾಂಸ ಮಾರಾಟ ಮಾಡುತ್ತಿರುವ ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.


ನಂಜನಗೂಡಿನ ರೈತನೊಬ್ಬನ ಬಳಿ ಗೋವನ್ನು ಖರೀದಿಸಿ ಹತ್ಯೆ ಮಾಡಿದ್ದ. ಅದರ ಮಾಂಸ ತೆಗೆದ ನಂತರ ತಲೆ, ಚರ್ಮ, ಕಾಲು ಸೇರಿದಂತೆ ಇತರ ಭಾಗಗಳನ್ನು ಕಾಲುವೆಗೆ ಬಿಸಾಡಿದ್ದ. ಇದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.