ಹಳಿಯಾಳ: ಗ್ರಾಹಕರಿಗೆ ನೀಡಿದ ಚಿಕನ್ ಬಿರ್ಯಾನಿಯಲ್ಲಿ ಗೋ ಮಾಂಸ ಮಿಶ್ರಣವಾಗಿರುವ ದೂರಿನ ಹಿನ್ನೆಲೆಯಲ್ಲಿ ಪುರಸಭೆ ಅಽಕಾರಿಗಳು ಆಹಾರ ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.
ಹಂಪಿಹೊಳಿ ಗ್ರಾಮದ ಸಂತೋಷ ಮಂಜಣ್ಣವರ್, ಸತೀಶ ಕದಂ, ಶಂಭಾಜಿ ಕದಂ ಎಂಬುವವರು ಬುಧವಾರ ಪುರಸಭೆ ವ್ಯಾಪ್ತಿಯ ನ್ಯೂ ಹೋಟೆಲ್ ಹುಬ್ಬಳ್ಳಿ ತಗಡ ಬಿರ್ಯಾನಿ ಎಂಬ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಆದರೆ, ಬಿರ್ಯಾನಿಯ ಋಚಿ ಭಿನ್ನವಾಗಿದ್ದು, ಅನುಮಾನ ಬಂದ ಹಿನ್ನೆಲೆಯಲ್ಲಿ ಮಾಲೀಕರನ್ನು ವಿಚಾರಿಸಿದ್ದರು.
ಆದರೆ, ಮಾಲೀಕರ ಮೊಹಮದ್ ಝುಬೇರ್ ಅವರು ಅದಕ್ಕೆ ಸರಿಯಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಕರೆ ಮಾಡಿ ತಿಳಿಸಿದ್ದು, ಊರಿನ ಜನ ಹೋಟೆಲ್ ಎದುರು ಸೇರಿ ಪ್ರತಿಭಟನೆಗೆ ಇಳಿದರು. ಘಟನೆಯ ವಿಷಯ ತಿಳಿದು ಆಗಮಿಸಿದ ಪುರಸಭೆಯ ಅಽಕಾರಿಗಳು ಹೋಟೆಲ್‌ನಲ್ಲಿ ತಯಾರಿಸಿಟ್ಟ ಹಾಗೂ ಪೂರೈಸಿದ ಆಹಾರವನ್ನು ವಶಕ್ಕೆ ಪಡೆದು, ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಪಿಎಸ್‌ಐಗಳಾದ ಬಸವರಾಜ ಮಬನೂರು, ಕೃಷ್ಣ ಅರಕೇರಿ ಸ್ಥಳಕ್ಕಾಗಮಿಸಿ ಜನರನ್ನು ಚರುರಿಸಿದರು.