ಜಿಲ್ಲೆ

ಪಲ್ಟಿಯಾದ ಮೀನು ವಾಹನದಲ್ಲಿತ್ತು ಬೀಫ್‌ !

ಸುಭಾಸ ಹೆಗಡೆ ಧೂಪದಹೊಂಡ

ಕುಮಟಾ: ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಅಂಚಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಗುರುವಾರ ಬೆಳಗ್ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಮೀನು ಸಾಗಾಟದ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸ (ಬೀಫ್‌) ಪತ್ತೆಯಾಗಿದೆ.

ಶಿರಸಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಗಣೇಶ ಹರಿಕಂತ್ರ ಎಂಬವರಿಗೆ ಸೇರಿದ ಬೊಲೆರೋ ಪಿಕಪ್ ವಾಹನಲ್ಲಿ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ 923 ಕೆ.ಜಿ. ದನದ ಮಾಂಸ ಪತ್ತೆಯಾಗಿದೆ.

ಅಪಘಾತದ ಬಳಿಕ ವಾಹನ ಚಾಲಕ ಜಾವೇದ್ ಪರಾರಿಯಾಗಿದ್ದು ಅಪಘಾತದಿಂದಾಗಿ ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅತಿ ವೇಗ ಹಾಗೂ ನಿಷ್ಕಾಳಜಿಯ ಚಾಲನೆಗಾಗಿ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.