ಜಿಲ್ಲೆ

30ರಿಂದ ಬೆದ್ರಡ್ಕ ಜಾತ್ರೆ, ಬಂಡಿ ಉತ್ಸವ : ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಸೌಮ್ಯ ಆರ್

ಕುಂಬಳೆ: ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವರ್ಷಾವಧಿ ಜಾತ್ರೆ ಹಾಗೂ ಬಂಡಿ ಉತ್ಸವ ಮಾ.30ರಿಂದ ಏಪ್ರಿಲ್ 4ರ ತನಕ ಕ್ಷೇತ್ರದ ತಂತ್ರಿ ಉಳಿಯತ್ತಾಯ ವಿಷ್ಣು ಅಸ್ರ ಮಾರ್ಗದರ್ಶನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

30ರಂದು ಸಂಜೆ 4 ಗಂಟೆಗೆ ಕೋಟೆಕುಂಜ ಮಾಳ್ಯ ಮೂಲಸ್ಥಾನದಿಂದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಕೀರ್ಮಾಳು ಆಗಮಿಸಲಿದ್ದು, ರಾತ್ರಿ ಗಂಟೆ 7.30ಕ್ಕೆ ತಂತ್ರಿಗಳು ಧ್ವಜಾರೋಹಣ ನಡೆಸುವರು. ಬಳಿಕ ತಂಬಿಲ ಮತ್ತು ಮಹಾಪೂಜೆ ನಡೆಯಲಿದೆ.

31ರಂದು ಯಕ್ಷಗಾನ ಬಯಲಾಟ, ಕೊಟ್ಯತ್ತಾಯನ ತಂಬಿಲ ಮತ್ತು ಮಹಾಪೂಜೆ ನಡೆಯಲಿದೆ. ಏಪ್ರಿಲ್ 1ರಂದು ಶ್ರೀ ಕಿನ್ನಿಮಾಣಿ ದೈವದ ನೇಮ, ಸ್ಯಾಕ್ಸೊಫೋನ್ ವಾದನ, ಕುಣಿತ ಭಜನಾ ಸೇವೆ, ನೃತ್ಯ ವೈವಿಧ್ಯ ಕಾರ್ಯಕ್ರಮ, ಪಾಪೆ ಬಂಡಿ ಉತ್ಸವ, ಬಂಡಿಕಾಣಿಕೆ, ತಂಬಿಲ ಮಹಾಪೂಜೆ ನಡೆಯಲಿದೆ.

2ರಂದು ಶ್ರಿ ಪೂಮಾಣಿ ದೈವದ ನೇಮ, ಫ್ಯೂಷನ್ ತಿರುವಾದಿರ ಹಾಗೂ ಸಮೂಹ ನೃತ್ಯ ಸೇವೆ, ಕಣ್ಣೂರು ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನದಿಂದ ನಂತರ ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ದೈವಗಳ ಭಂಡಾರ ಮೆರವಣಿಗೆಯೊಂದಿಗೆ ಆಗಮಿಸಲಿದೆ. ರಾತ್ರಿ ಸಾಹಿತ್ಯ ಗಾನ ನೃತ್ಯ ವೈಭವ, ಪಾಪೆ ಬಂಡಿ ಉತ್ಸವ, ವಿಶೇಷ ಸಿಡಿಮದ್ದು ಪ್ರದರ್ಶನ ಬಂಡಿಕಾಣಿಕೆ, ತಂಬಿಲ ಮಹಾಪೂಜೆ ನಡೆಯಲಿದೆ.

3ರಂದು ಶ್ರೀ ಬೀರ್ಣಾಳ್ವ ದೈವದ ನೇಮ, ಶ್ರೀ ಧೂಮಾವತೀ ದೈವದ ನೇಮ, ರಾತ್ರಿ ಮಂಗಳಸ್ನಾನ ಹಾಗೂ ತಂತ್ರಿಗಳಿಂದ ಧ್ವಜಾವರೋಹಣ, ತಂಬಿಲ ಮಹಾಪೂಜೆ ಹಾಗೂ ಅಯ್ಯಂಗಾಯಿ ನಡೆಯಲಿದೆ.

4ರಂದು ಕೋಟೆಕುಂಜ ಮಾಳ್ಯ ಮೂಲಸ್ಥಾನಕ್ಕೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಕೀರ್ಮಾಳುಗಳು, ಕಣ್ಣೂರು ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನಕ್ಕೆ ಹಾಗೂ ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನಗಳಿಗೆ ಶ್ರೀ ಕ್ಷೇತ್ರದಿಂದ ದೈವಗಳ ಭಂಡಾರ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.