ಶಿವಮೊಗ್ಗ: ಬಾಪೂಜಿನಗರದಲ್ಲಿ ವ್ಯಕ್ತಿಯೊಬ್ಬನನ್ನ ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‌ಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಗಂಗಮ್ಮ ದೇವಸ್ಥಾನ ಬಳಿ ಶನಿವಾರ ಸಂಜೆ ಘಟನೆ ನಡೆದಿದೆ.
ಸುರೇಶ್ ಅಲಿಯಾಸ್ ಆರ್‌ಏಕ್ಸೃ್ ಸೂರಿ(45) ಕೊಲೆಯಾದವ. ಗಂಗಮ್ಮ ದೇವಸ್ಥಾನದ ಬಳಿಯಲ್ಲಿ ಹುಡುಗರ ಜತೆ ಮಾತನಾಡುತ್ತಾ ನಿಂತಿದ್ದ ಸುರೇಶ್ ಮೇಲೆ ಅಪರಿಚಿತರು ಏಕಾಏಕಿ ದಾಳಿ ನಡೆಸಿ, ಬ್ಯಾಟ್ ಹಾಗೂ ವಿಕೆಟ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಸೂರಿ ಜೈಲಿನಿಂದ ರಿಲೀಸ್ ಆಗಿ ಬಂದಿದ್ದ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೋಟೆ ಸ್ಟೇಷನ್ ಪೊಲೀಸರು ತೆರಳಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.