ಜಿಲ್ಲೆ

ಉರುಳಿಗೆೆ ಸಿಲುಕಿದ್ದ ಕರಡಿ ರಕ್ಷಣೆ

ಆನೇಕಲ್: ಚಿಕ್ಕಬಳ್ಳಾಪುರದ ನಂದಿಬೆಟ್ಟದ ಅರಣ್ಯದಂಚಿನಲ್ಲಿ ಬೇಟೆಗಾರರ ಉರುಳಿಗೆ ಸಿಲುಕಿದ್ದ ಸುಮಾರು ಎರಡು ವರ್ಷದ ಹೆಣ್ಣು ಕರಡಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಕೀಯ ವಿಭಾಗದ ತಂಡ ರಕ್ಷಣೆ ಮಾಡಿದೆ.
ಸೋಮವಾರ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವುದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಕೀಯ ವಿಭಾಗದ ಡಾ.ಉಮಾಶಂಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕರಡಿಗೆ ಅರಿವಳಿಕೆ ನೀಡಿ ರಕ್ಷಣೆ ಮಾಡಿದೆ. ಬಳಿಕ ಸೂಕ್ತ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಗಿದೆ.