ಜಿಲ್ಲೆ

ವ್ಯಕ್ತಿ ಮೇಲೆ ಕರಡಿ ದಾಳಿ

ಗಂಗಾಧರ ಬಿ ವಿ

ಮಾಗಡಿ: ಶೌಚಾಲಯಕ್ಕೆ ತೆರಳಿದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆದಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಟಿಎನ್ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದ  ಮಹೇಂದ್ರ (45) ಕರಡಿ ದಾಳಿಯಿಂದ ತೀವ್ರಗಾಯಗೊಂಡ ವ್ಯಕ್ತಿ.  ಗುರುವಾರ ಬೆಳಗ್ಗೆ ಟಿಎನ್ ಪಾಳ್ಯ ಗ್ರಾಮ ಕೆರೆಯ ಬಳಿ ಶೌಚಾಲಯಕ್ಕೆ ತೆರಳಿದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ.

ಈ ವೇಳೆ ಮಹೇಂದ್ರ ಕಿರುಚಾಡುತ್ತಿದನ್ನು ಕಂಡ ಸ್ಥಳಿಯರು ಬಂದು ಕೂಗಾಡಿದ ವೇಳೆ ಕರಡಿ ಸ್ಥಳದಿಂದ ಕಾಲ್ಕಿತಿದೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಅಗಿದೆ.

ಸ್ಥಳಿಯರು ಕೂಡಲೇ ಕರಡಿಯಿಂದ ಗಾಯಗೊಂಡ ಮಹೇಂದ್ರ ರನ್ನು ತುಮಕೂರು ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿಸಿ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಘಟನೆ ತಿಳಿದ ವಲಯ ಅರಣ್ಯಾದಿಕಾರಿ ಚೈತ್ರ ಆಸ್ಪತ್ರೆಗೆ ತೆರಳಿ ಅರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ.