ಜಿಲ್ಲೆ

ರೈತನ ಮೇಲೆ ಕರಡಿ ದಾಳಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ

ಹೊಸಹಳ್ಳಿ ಸಮೀಪದ ಕುಕ್ಕಲಹಳ್ಳಿಯಲ್ಲಿ ಮೇಕೆ ಮೇಯಿಸುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ್ದು ರೈತ ಲಕ್ಷ್ಮೀನರಸಪ್ಪ (58) ತೀವ್ರ ಗಾಯಗೊಂಡಿದ್ದಾರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಕ್ಕಲಹಳ್ಳಿ ಗ್ರಾಮದ ಹೊರವಲಯದಲ್ಲಿ ಎಂದಿನಂತೆ ಮೇಕೆ ಮೇಯಿಸಲು ಹೋಗಿದ್ದ ವೇಳೆ ಕರಡಿ ದಾಳಿ ನಡೆಸಿದೆ. ಘಟನಾ ಸ್ಥಳದಲ್ಲಿ ಹಲಸಿನ ಮರಗಳಿದ್ದು, ಕರಡಿ ಹಣ್ಣು ತಿನ್ನಲು ಮರ ಹತ್ತಿತ್ತು ಎನ್ನಲಾಗಿದ್ದು ರೈತನ ಶಬ್ದ ಕೇಳುತ್ತಿದ್ದಂತೆ ಮೇಲೆ ಎರಗಿ ಮೈಯಲ್ಲಾ ಪರಚಿ ಗಾಯಪಡಿಸಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕರಡಿ ದಾಳಿಯಿಂದ ಗಾಯಗೊಂಡ ಲಕ್ಷ್ಮಿನರಸಪ್ಪನನ್ನು ಕೂಡಲೇ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.