ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದ ವತಿಯಿಂದ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಹರೀಶ್ ಮಸ್ಕತ್, ರೇಷ್ಮಾ ಎ.ಮೆಂಡನ್, ಮೋಹನ್ ಸುವರ್ಣ, ಫರೀದಾ, ಇನಾಯತ್ ಉಲ್ಲಾಬೇಗ್, ಹೇಮಾನಂದ ಕೆ.ಪುತ್ರನ್, ಲಾಲಾಜಿ ಎಸ್.ಸುವರ್ಣ, ಮಾಧವ ಸನಿಲ್, ಎಸ್.ದಿವಾಕರ ಹೆಜ್ಮಾಡಿ ಇದ್ದರು 
ಜಿಲ್ಲೆ

`ಸ್ವಚ್ಛ ಕಡಲ ಕಿನಾರೆ' ಬೀಚ್ ಸ್ವಚ್ಛತಾ ಅಭಿಯಾನ

ಇಂದಿರಾ ಎನ್ ಕೆ

ಪಡುಬಿದ್ರಿ: ಹೆಜಮಾಡಿ ಕರಾವಳಿ ಯುವಕ ಯುವತಿ ವೃಂದ ವತಿಯಿಂದ ಸ್ವಾತಂತ್ರೃ ದಿನಾಚರಣೆ ಹಾಗೂ ಹೆಜಮಾಡಿ ಗ್ರಾಪಂ ಸಹಯೋಗದೊಂದಿಗೆ ಸ್ವಚ್ಛ ಕಡಲ ಕಿನಾರೆ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನ ನಡೆಯಿತು. ಉದ್ಯಮಿ ಹರೀಶ್ ಮಸ್ಕತ್ ಧ್ವಜಾರೋಹಣ ನೆರವೇರಿಸಿದರು.

ಗ್ರಾಪಂ ಅಧ್ಯಕ್ಷೆ ರೇಷ್ಮಾ ಎ.ಮೆಂಡನ್ ಅಭಿಯಾನಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಮೋಹನ್ ಸುವರ್ಣ, ಸದಸ್ಯೆ ಫರೀದಾ, ಪಿಡಿಒ ಇನಾಯತ್ ಉಲ್ಲಾಬೇಗ್, ಹೇಮಾನಂದ ಕೆ.ಪುತ್ರನ್, ಲಾಲಾಜಿ ಎಸ್.ಸುವರ್ಣ, ಮಾಧವ ಸನಿಲ್ ಮಾತನಾಡಿದರು.

ಯುವಕ ವೃಂದ ಅಧ್ಯಕ್ಷ ಎಸ್.ದಿವಾಕರ ಹೆಜ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಯುವತಿ ವೃಂದ ಅಧ್ಯಕ್ಷೆ ರೂಪಾ ಹೇಮಾನಂದ ಪುತ್ರನ್, ಸಂಸ್ಥೆ ಗೌರವಾಧ್ಯಕ್ಷ ದಿನೇಶ್ ಸುವರ್ಣ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸಂಪತ್ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ರಂಜನ್ ಕೋಟ್ಯಾನ್ ವಂದಿಸಿದರು.