ಜಿಲ್ಲೆ

ವಿಜ್ಞಾನದ ಜತೆ ಅಧ್ಯಾತ್ಮವೂ ಇರಲಿ

ಕೆಂಪೇಗೌಡ ೌಂಡೇಷನ್ ಉಪಾಧ್ಯಕ್ಷ ಎಚ್.ಡಿ.ರಾಜೇಶ್‌ಗೌಡ, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ತಾಪಂ ಮಾಜಿ ಅಧ್ಯಕ್ಷ ಕಾಮನಹಳ್ಳಿ ರಾಮಣ್ಣ, ಮುಖಂಡರಾದ ಕೆಂಪೀರೇಗೌಡ, ಬೇಗೂರು ರಾಮಣ್ಣ, ಕಪನಿಪಾಳ್ಯ ನಾರಾಯಣ್, ತಾಪಂ ಮಾಜಿ ಸದಸ್ಯರಾದ ಐ.ಎ.ವಿಶ್ವನಾಥ್, ಲೋಕೋಪಯೋಗಿ ಇಲಾಖೆಯ ಗಿರಿಗೌಡ ಇದ್ದರು.

ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ದೇವಸ್ಥಾನಗಳಿದ್ದು, ಜನತೆಗೆ ಶಾಂತಿ ನೆಮ್ಮದಿ ನೀಡುವ ಶ್ರದ್ಧಾಭಕ್ತಿ ಕೇಂದ್ರಗಳಾಗಿವೆ. ಮನುಷ್ಯ ಎಷ್ಟೇ ಬೆಳೆದರೂ ಅಧ್ಯಾತ್ಮ ಮರೆಯಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಆಧ್ಯಾತ್ಮಿಕತೆ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಪಾಳು ಮಂಟಪದಲ್ಲಿದ್ದ ಲಕ್ಷ್ಮೀ ನರಸಿಂಹ ದೇವಾಲಯವನ್ನು ಗ್ರಾಮದ ಹಿರಿಯರಾದ ನೊರಂಜನಕುಪ್ಪೆ ಶಿವರಾಮಯ್ಯ ತಂಡ ಕಟ್ಟಿಕೊಂಡು ದಾನಿಗಳ ಸಹಾಯದಿಂದ 40 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಾಲಯ ನಿರ್ಮಿಸಿರುವುದು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಧುನಿಕತೆ ಸೋಗಿನಲ್ಲಿ ಮನುಷ್ಯನ ಹೃದಯ ಬಾಡುತ್ತಿದೆ. ಮನುಷ್ಯ ಆಧುನಿಕ ಜಗತ್ತಿನಲ್ಲಿ ನೆಮ್ಮದಿ ಕಳೆದುಕೊಂಡು ತತ್ತರಿಸುತ್ತಿದ್ದಾನೆ. ವಿಜ್ಞಾನ ಇದ್ದರೆ ಸಾಲದು, ಅಧ್ಯಾತ್ಮವೂ ಬೇಕು. ಆಧ್ಯಾತ್ಮಿಕ ಹಾಗೂ ವಿಜ್ಞಾನ ಎರಡೂ ಸಮಾನವಾಗಿ ಹೋದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಕೊತ್ತಗೆರೆ ಹೋಬಳಿ ನೊರಜನಕುಪ್ಪೆಯಲ್ಲಿ ಬುಧವಾರ ಆಯೋಜಿಸಿದ್ದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಆಧುನಿಕತೆ ಬೆಳೆದಂತೆ ಆಧ್ಯಾತ್ಮಿಕ ವಿದ್ಯೆ ಇಳಿಮುಖವಾಗುತ್ತಿದೆ. ಇದು ಉತ್ತಮ ಬೆಳವಣೆಗೆಯಲ್ಲ. ವಿಜ್ಞಾನ ಹಾಗೂ ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಂತೆ ಇರಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ವಿಜಯವಾಣಿ ಸುದ್ದಿಜಾಲ ಕುಣಿಗಲ್

ದೇವಸ್ಥಾನದ ಸುತ್ತಲೂ ಇರುವ 3 ಎಕರೆ ಜಾಗದಲ್ಲಿ ಸಸಿಗಳನ್ನು ನೆಟ್ಟು ಒಳ್ಳೆಯ ಪರಿಸರ ನಿರ್ಮಿಸುವ ಆದಿಚುಂಚನಗಿರಿಯ ಹಿರಿಯ ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ನವಸಂವರ್ಧನ ಟ್ರಸ್ಟ್ ಕಲ್ಪನೆ ಜಾರಿ ಮಾಡಬೇಕು. ಈ ಕಾರ್ಯಕ್ರಮ ಉದ್ಘಾಟನೆಗೂ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನೇ ಕರೆಸಬೇಕು. ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ ಮಠ-ಮಂದಿಗಳು ಹೆಚ್ಚು ಅಭಿವೃದ್ಧಿ ಹೊಂದುವ ಮೂಲಕ ಮನುಷ್ಯನಿಗೆ ಜ್ಞಾನದ ಅರಿವು ಮೂಡಿಸುವ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ರಸ್ತೆ, ಚರಂಡಿ, ಸೇರಿ ಮೂಲಸೌಕರ್ಯ ಕಲ್ಪಿಸುವ ಬಹಿರಂಗ ಅಭಿವೃದ್ಧಿ ಮಾಡಬೇಕು. ಸನ್ಯಾಸಿಗಳಾದ ನಾವುಗಳು ಮನುಷ್ಯದ ಕತ್ತಲೆಯ ಜಗತ್ತಿನಿಂದ ಜ್ಞಾನಜೋತ್ಯಿಯ ಅರಿವು ಮೂಡಿಸುವ ಅಂತರಂಗ ಅಭಿವೃದ್ಧಿ ಮಾಡಬೇಕು. ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ