ಕಾರದಗಾ ಗ್ರಾಮಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು. ತಹಸೀಲ್ದಾರ್ ಮುಜಾಫರ್ ಬಳಿಗಾರ, ನೋಡಲ್ ಅಧಿಕಾರಿ ಎ.ಎಸ್.ಪೂಜಾರಿ ಇತರರಿದ್ದರು.  
ಜಿಲ್ಲೆ

ಕಾಳಜಿ ಕೇಂದ್ರ ತೆರೆಯಲು ಸಿದ್ಧರಿರಲಿ

ಪ್ರಶಾಂತ ಹೂಗಾರ

ಬೋರಗಾವ: ಸಮೀಪದ ಕಾರದಗಾ ಗ್ರಾಮಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಶುಕ್ರವಾರ ಭೇಟಿ ನೀಡಿ, ಪ್ರವಾಹ
ಪರಿಸ್ಥಿತಿ ವೀಕ್ಷಿಸಿದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರವಾಹ ಸನಿಹದ ಹಿನ್ನಲೆಯಲ್ಲಿ ಯಾವುದೇ ಪರಿಸ್ಥಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳು ಸಿದ್ಧರಿರಬೇಕು. ಜಾನುವಾರುಗಳ ಮೇವಿನ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.

ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಭಯಪಡಬಾರದು ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.

ತಹಸೀಲ್ದಾರ್ ಮುಜಾಫರ್ ಬಳಿಗಾರ, ನೋಡಲ್ ಅಧಿಕಾರಿ ಎ.ಎಸ್.ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದಕುಮಾರ ಪಪ್ಪೆ, ಗ್ರಾಮ ಲೆಕ್ಕಾಧಿಕಾರಿ ಎಂ.ಎಸ್.ಸನದಿ, ನಿತೇಶ ಖೋತ, ಗ್ರಾಪಂ ಸದಸ್ಯ ದೇವಪ್ಪ ದೇವಕಾತೆ, ಅರವಿಂದ ಖರಾಡೆ, ಬಾಬಾಸಾಬ ಖೋತ, ಸುಕಮಾ ಚವ್ಹಾಣ, ಸೋಮು ಗಾವಡೆ, ಮಂಗಳ ಕುಂಬಾರ, ವೈಶಾಲಿ ಖರಡೆ, ದೀಪಾಲಿ ಕುಂಬಾರ ಇತರರಿದ್ದರು.