ಗೋಕಾಕ: ಜೂನ್ ತಿಂಗಳಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಹೆಚ್ಚಾಗುವ ಮೂನ್ಸೂಚನೆ ಇದ್ದು, ಮಳೆ ಹಾಗೂ ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ಇಲಾಖೆಗಳು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಸೂಚಿಸಿದರು.
ನಗರದ ಶಾಸಕರ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ರೂಪಾಂತರಿ ಪ್ರಕರಣಗಳು ಸ್ಥಳಿಯವಾಗಿ ವರದಿಯಾಗಿಲ್ಲ. ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ ಆರೋಗ್ಯ ಇಲಾಖೆ ಜನರ ಆರೋಗ್ಯ ರಣೆಗೆ ಮಹತ್ವ ನೀಡಬೇಕು. ಔಷಧಗಳ ದಾಸ್ತಾನಿನೊಂದಿಗೆ ಎಲ್ಲ ಸಿಬ್ಬಂದಿ ಕಾರ್ಯಪ್ರವತ್ತರಾಗಬೇಕು ಎಂದರು.
ನೀರಾವರಿ ಇಲಾಖೆ ಅಧಿಕಾರಿಗಳು ನದಿಗಳ ನೀರಿನ ಪ್ರಮಾಣದ ಮೇಲೆ ನಿಗಾವಹಿಸಿ ಅಲ್ಲಿನ ಜನರಿಗೆ ಯಾವುದೇ ಅನಾಹುತಗಳಾಗದಂತೆ ಕ್ರಮ ಕೈಗೊಳ್ಳಬೇಕು. ಹೆಸ್ಕಾಂ ಕೃಷಿ ಪಂಪ್ಸೆಟ್ ಹಾಗೂ ಮನೆಗಳ ವಿದ್ಯುತ್ ಸಂಪರ್ಕ ಕಡಿತವಾಗದಂತೆ ನೋಡಿಕೊಳ್ಳಬೇಕು. ನಗರಸಭೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರದಲ್ಲಿ ಪ್ರವಾಹ ಬರುವ ಭಾಗಗಳ ಜನರ ಸುರತೆ ಬಗ್ಗೆ ಕ್ರಮ ವಹಿಸಬೇಕು. ಪಶು ಸಂಗೋಪನೆ ಇಲಾಖೆ ಜಾನುವಾರುಗಳ ಆರೋಗ್ಯ ರಣೆ ಜತೆಗೆ ಮೊಬೈಲ್ ವಾಹನದ ಸದ್ಬಳಕೆ ಮಾಡಿಕೊಳ್ಳಬೇಕು. ಲೋಕೋಪಯೋಗಿ ಇಲಾಖೆಯವರು ನಗರದ ಎಪಿಎಂಸಿ ರಸ್ತೆಯ ಕಾಮಗಾರಿ ಬೇಗ ಮುಗಿಸಬೇಕು ಎಂದು ಸೂಚಿಸಿದರು. ತಹಸೀಲ್ದಾರ್ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸ್ತೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.