ಬೆಳಗಾವಿ: ತಾಳ್ಮೆ ಹಾಗೂ ಶಾಂತಿಯಿಂದ ಜಗತ್ತೇ ಗೆಲ್ಲಬಹುದು. ಆದ್ದರಿಂದ ಯಾರಿಗೂ ಕೋಪ ಒಳ್ಳೆಯದಲ್ಲ ಎಂದು ಗೋಕಾಕ ತಾಲೂಕು ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂದಿಹಟ್ಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಮಾತನಾಡಿದರು.ಮಹಾಪೌರ ಮಂಗೇಶ ಪವಾರ, ಕನ್ನಡ ಮತ್ತು ಸಂಸತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಹಣಬರ ಯಾದವ ಸಂದ ಅಧ್ಯಕ್ಷ ಎಸ್.ಎ. ಮುಂಡೆ ಹಾಗೂ ಇತರರಿದ್ದರು.