ಸಾಗರದ ಎಂಡಿಎ್ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೋಹನ್ ಜಗದೀಶ್, ಡಾ. ಜಗದೀಶ್ ಎಂ.ಭಂಡಾರಿ, ಬಿ.ಆರ್.ಜಯಂತ್, ವೆಂಕಟೇಶ್ ಕೆ.ಕವಲಕೋಡು, ವರ್ಷಾ ಇತರರಿದ್ದರು. 
ಜಿಲ್ಲೆ

ಉದ್ಯೋಗಿಗಳಲ್ಲ ಉದ್ಯೋಗ ಸೃಷ್ಟಿಕರ್ತರಾಗಿ; ವಿದ್ಯಾರ್ಥಿಗಳಿಗೆ ಎಎಸ್‌ಪಿ ರೋಹನ್ ಜಗದೀಶ್ ಕಿವಿಮಾತು

ಸಾಗರ: ಯಾರದ್ದೋ ಒತ್ತಾಯಕ್ಕೆ ನಾವು ಓದುವುದಲ್ಲ. ಓದುವ ವಿಷಯ ನಮ್ಮ ಆಯ್ಕೆಯಾಗಿರಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಎಎಸ್‌ಪಿ ರೋಹನ್ ಜಗದೀಶ್ ಹೇಳಿದರು.

ಎಂಡಿಎಫ್ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಉದ್ಯೋಗಿ ಆಗುವ ಬದಲು ಉದ್ಯೋಗ ಸೃಷ್ಟಿಸುವವರಾಗಬೇಕು. ಯುವಶಕ್ತಿಯ ಸದ್ಬಳಕೆ ಆಗಬೇಕು. ಸಾಮಾಜಿಕ ಜಾಲತಾಣಗಳನ್ನು ಜ್ಞಾನ ಹೆಚ್ಚಿಸಿಕೊಳ್ಳಲು ಸದುಪಯೋಗ ಪಡಿಸಿಕೊಳ್ಳಬೇಕು. ಅತಿ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಕೊಳ್ಳುವ ಮೂಲಕ ನೈಜತೆಯನ್ನೇ ಕಳೆದುಕೊಂಡು ಬಿಡುತ್ತೇವೆ. ಜಾಲತಾಣಗಳ ಬಳಕೆಗೆ ಸ್ವಯಂ ನಿಯಂತ್ರಣ ಅಗತ್ಯ ಎಂದರು.
ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್ ಮಾತನಾಡಿ, ಅಂಕ ಗಳಿಸುವ ಜತೆಗೆ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಲು ಯತ್ನಿಸಬೇಕು. ಎಂಡಿಎ್ ತನ್ನ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಹೆಚ್ಚಿನ ಕಾಳಜಿ ತೆಗೆದುಕೊಳ್ಳುತ್ತಿದೆ ಎಂದರು.
ವಿದ್ಯಾರ್ಥಿನಿಯರಾದ ಸುಷ್ಮಾ, ಅನುಷಾ, ನವ್ಯಶ್ರೀ ಅವರನ್ನು ಅಭಿನಂದಿಸಲಾಯಿತು. ಪ್ರಾಚಾರ್ಯ ಡಾ. ಜಗದೀಶ್ ಎಂ.ಭಂಡಾರಿ, ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್.ಜಯಂತ್, ಕೋಶಾಧ್ಯಕ್ಷ ವೆಂಕಟೇಶ್ ಕೆ.ಕವಲಕೋಡು, ವರ್ಷಾ, ಟಿ.ಎಸ್.ಪ್ರಣವ್ ಕುಮಾರ್, ಪಿ.ಡಿ.ನಾರಾಯಣಮೂರ್ತಿ, ಜಿ.ಪಿ.ಶ್ರೀಪಾದ, ಟಿ.ಎಂ.ಶ್ರೇಯಸ್, ಹೀರಾ ಾತೀಮಾ ಇತರರಿದ್ದರು.