ಜಿಲ್ಲೆ

ವಾಲಿಬಾಲ್ ಪಂದ್ಯಾವಳಿ ಸದುಪಯೋಗವಾಗಲಿ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ಬಿಜೆಪಿ ಯುವ ಮೋರ್ಚಾ ಬೈಲಹೊಂಗಲ ಮಂಡಲ ವತಿಯಿಂದ ಡಿ.25, 26 ಮತ್ತು 27ರಂದು ನಗರದ ಶೂರ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ರಾಷ್ಟ್ರಮಟ್ಟದ ಪುರುಷರ ಮುಕ್ತ ವಾಲಿಬಾಲ್

ಪಂದ್ಯಾವಳಿಯ ಭಿತ್ತಿ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆಳಗಾವಿಯ ಕೆಎಲ್ಇ ಅತಿಥಿ ಗೃಹದಲ್ಲಿ ಹಾಗೂ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಬೈಲಹೊಂಗಲದಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಪಂದ್ಯಾವಳಿಯನ್ನು ರಾಜ್ಯ ಮತ್ತು ಹೊರರಾಜ್ಯದ ಕ್ರೀಡಾಸಕ್ತರು ಸದುಪಯೋಗ ಪಡೆದುಕೊಳ್ಳಲಿ, ಬದಲಾಗುತ್ತಿರುವ ಭಾರತದಲ್ಲಿ ಯುವಶಕ್ತಿಯ ಪ್ರೇರಣಾ ಕಾರ್ಯಗಳು ಇತರರಿಗೆ ಮಾದರಿಯಾಗಲಿ ಎಂದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿದ್ದು, ಬೇರೆ ಬೇರೆ ರಾಜ್ಯದ ಕ್ರೀಡಾಪಟುಗಳು ಪಂದ್ಯಾವಳಿಗೆ ಆಗಮಿಸುತ್ತಿರುವುದು ಕ್ರೀಡಾಸಕ್ತರ ಖುಷಿ ಇಮ್ಮಡಿಗೊಳಿಸಿದೆ ಎಂದರು.

ಮಲ್ಲಿಕಾರ್ಜುನ ಬಾಳಿಕಾಯಿ, ಈರಣ್ಣ ಅಂಗಡಿ, ಗುರುಪಾದ ಕಳ್ಳಿ, ಸುನೀಲ ಮರಕುಂಬಿ, ಪ್ರಶಾಂತ ಅಮ್ಮಿನಬಾವಿ, ಸುಭಾಷ ತುರುಮರಿ, ಸಚಿನ ಕಡಿ, ಸಂತೋಷ ಹಡಪದ, ಶಿವಾನಂದ ಬಡ್ಡಿಮನಿ, ಜಗದೀಶ ಬೂದಿಹಾಳ, ದಯಾನಂದ ಪರಾಳಶೆಟ್ಟರ, ಲಕ್ಕಪ್ಪ ಕಾರಗಿ ಇತರರಿದ್ದರು.