ಸಂಡೂರು: ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ 60 ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ ರಚಿಸಲಾಗಿದೆ ಎಂದು ತಾಪಂ ಇಒ ಎಚ್.ಷಡಕ್ಷರಯ್ಯ ಹೇಳಿದರು.
ತಾಲೂಕಿನ ಚೋರನೂರು ಗ್ರಾಪಂ ಆವರಣದಲ್ಲಿ ಸಂಡೂರು ಸಂಜೀವಿನಿ ಮಹಿಳಾ ಕಿಸಾನ್ ಕಂಪನಿಯ ಮೊದಲನೆ ವಾರ್ಷಿಕ ಸಭೆ ಹಾಗೂ ಕಂಪನಿಯ ಷೇರುದಾರರ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಇದನ್ನು ಓದಿ :ಮಹಿಳಾ ಸಬಲೀಕರಣಕ್ಕೆ ‘ಉದ್ಯೋಗ ಖಾತ್ರಿ’ ಬಲ
ಸಂಜೀವಿನಿ ಯೋಜನೆಯಡಿ ಸ್ವಸಹಾಯ ಗುಂಪಿನ ಒಂದು ಸಾವಿರ ಮಹಿಳೆಯರನ್ನು ಒಗ್ಗೂಡಿಸಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ ರಚಿಸಿದ್ದು ಇದರ ಸದುಪಯೋಗ ಪಡೆದು ಉತ್ತಮವಾಗಿ ಕೃಷಿ ಜೀವನೋಪಾಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಉದ್ಯೋಗ ಖಾತ್ರಿಯಡಿ ವೈಯುಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಹಳ್ಳ, ಕೆರೆ ಮುಂತಾದೆಡೆ ಸಾಮೂಹಿಕ ಕಾಮಗಾರಿ ಕೈಗೊಂಡರೆ, ಕುರಿಹಟ್ಟಿ, ಕೋಳಿ, ದನ, ಕರು ಶೇಡ್‌ಗಳು, ಕೃಷಿಹೊಂಡ, ಎರೆಹುಳು ಘಟಕ, ತೆರೆದ ಬಾವಿ ಮುಂತಾದ ಕಾಮಗಾರಿಗಳು ವೈಯುಕ್ತಿಕ ಘಟಕದಲ್ಲಿ ಕೈಗೊಳ್ಳಬೇಕು ಎಂದರು.
ಉದ್ಯೋಗಖಾತ್ರ ಎಡಿ ರೇಣುಕಾಚಾರ್ಯ ಸ್ವಾಮಿ ಮಾತನಾಡಿ, ಯರ‌್ರಯ್ಯನಹಳ್ಳಿ, ಗೊಲ್ಲಲಿಂಗಮ್ಮನಹಳ್ಳಿ, ಬಂಡ್ರಿ, ನೀಡಗುರ್ತಿ, ಕಾಳಿಂಗೇರಿ, ಎಚ್.ಕೆ.ಹಳ್ಳಿ, ಸೋವೇನಹಳ್ಳಿಗಳ ಲಾನುಭವಿಗಳಿಗೆ ಸಾಮೂಹಿಕ ಕಾಮಗಾರಿಗಳ ಆದೇಶಪತ್ರಗಳನ್ನು ವಿತರಿಸಲಾಗಿದೆ ಎಂದರು.
ಸದಸ್ಯರಾದ ಜ್ಯೋತಿ, ಗ್ರಾಪಂ ಪಿಡಿಒ ಅಬ್ದುಲ್‌ಸಾಬ್ ಖಾದರಿ, ಕಾರ್ಯದರ್ಶಿ ಕರಿಬಸಪ್ಪ, ಖಾದರ್‌ಭಾಷಾ, ಸಂಜೀವಿನಿ ಕಂಪನಿಯ ವ್ಯವಸ್ಥಾಪಕ ಸೋಮಶೇಖರ ಇತರರಿದ್ದರು.