ಜಿಲ್ಲೆ

ಶಿಸ್ತು, ಸಮಯ ಪಾಲನೆಯಾಗಲಿ

ಪ್ರಶಾಂತ ಹೂಗಾರ

ಚಿಕ್ಕೋಡಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಿಎಲ್‌ಇ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಐ. ಬಿಸ್ಕೋಪ ಹೇಳಿದರು.

ಸಿಎಲ್‌ಇ ಸಂಸ್ಥೆಯ ಎಂ.ಕೆ. ಕವಟಗಿಮಠ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಎ.ವಿ. ಕುಲಕರ್ಣಿ ಮಾತನಾಡಿದರು. ಸಿಎಲ್‌ಇ ನಿರ್ದೇಶಕ ಮಹೇಶ ಫರಾಳೆ, ಮುಖ್ಯ ಶಿಕ್ಷಕ ಡಿ.ಎಸ್. ಕೋಳಿ, ಬಿ.ಡಿ. ರುಕಡೆ ಇತರರಿದ್ದರು. ಋತುಜಾ ಮುಂಡೆ ಸ್ವಾಗತಿಸಿದರು. ಪ್ರೀತಿ ಕಾಂಬಳೆ ನಿರೂಪಿಸಿದರು. ಪ್ರವಣ ಹಂಪನ್ನವರ ವಂದಿಸಿದರು.