ಜಿಲ್ಲೆ

ಓದು, ಕ್ರೀಡೆಗಳಲ್ಲಿ ಇರಲಿ ಆಸಕ್ತಿ

Davangere - Desk - Mahesh Babu E

ಪರಶುರಾಮಪುರ: ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ತೋರುವವರ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಚಳ್ಳಕೆರೆ ತಾಲೂಕು ಕ್ರೀಡಾಧಿಕಾರಿ (ಟಿಪಿಒ) ಜಿ.ಗುರುಮೂರ್ತಿ ಹೇಳಿದರು.

ಗ್ರಾಮದ ವೇದಾವತಿ ಎಜುಕೇಷನಲ್ ಟ್ರಸ್ಟ್ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಲಯ-1 ಕ್ರೀಡಾಕೂಟದಲ್ಲಿ ಮಾತನಾಡಿದರು.

ಆಟ, ಪಾಠ ಜತೆಗೆ ಒಳ್ಳೆಯ ಕೃತಿಗಳನ್ನು ಓದುವ ಹವ್ಯಾಸ, ಗುರು-ಹಿರಿಯರನ್ನು ಗೌರವಿಸುವ ಗುಣದಿಂದ ಸಾಧನೆ ಮಾಡಲು ಸುಲಭ ಹಾದಿ ದೊರೆಯಲಿದೆ ಎಂದರು.

ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ಎಂ.ಕೆ.ಬಸವರಾಜು, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು. ಇದರಿಂದ ಅವರ ಸಮಗ್ರ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಎಂ.ಆರ್.ರುದ್ರೇಶ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶ್ರೀನಿವಾಸ, ಪ್ರಕಾಶ, ಎಂ.ಆರ್.ರುದ್ರೇಶ, ಎಎಸ್‌ಐ ನಜೀರುಲ್ಲಾ, ವೇದಾವತಿ ಸಂಸ್ಥೆಯ ಅಧ್ಯಕ್ಷ ಎ.ನಾಗೇಶ, ತಿಪ್ಪೇಸ್ವಾಮಿ, ಶಿವಾನಂದಪ್ಪ, ಶ್ರೀಧರ, ಶಿವಪ್ರಕಾಶ ಪಾಟೀಲ್ ಇದ್ದರು.