ಸವದತ್ತಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭವನ್ನು ಜಗದೀಶ ಶಿಂತ್ರಿ ಉದ್ಘಾಟಿಸಿದರು. ಡಾ.ಎಚ್.ಟಿ. ಮಳಲಿ, ಬಿ.ಕೆ. ಕಠಾರೆ, ಎಸ್.ಬಿ. ಗುಡೆನ್ನವರ, ಎಂ.ಆರ್. ಶಿವನಾಯ್ಕರ ಇತರರು ಇದ್ದರು. 
ಜಿಲ್ಲೆ

ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇರಲಿ

ರಾಘವೇಂದ್ರಗೌಡ ಭೀ ಪಾಟೀಲ್

ಸವದತ್ತಿ: ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ ಎಂದು
ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ ಶಿಂತ್ರಿ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಯಾದ ಎಸ್.ಕೆ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆ ಜತೆಗೆ ಸಂಗೀತ, ನೃತ್ಯ, ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಒಳ್ಳೆಯ ಹವ್ಯಾಸಗಳ ರೂಢಿಸಿಕೊಳ್ಳಬೇಕು. ಶಿಸ್ತು ಹಾಗೂ ಶ್ರಮ ವಹಿಸಿ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ ಎಂದರು.

ಪಾರಂಪರಿಕ ತಜ್ಞ ಡಾ.ಎಚ್.ಟಿ. ಮಳಲಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರಯುತ ಜೀವನ ಶೈಲಿ ರೂಢಿಸುವಲ್ಲಿ ಶಿಕ್ಷಕ ಮತ್ತು ಪಾಲಕರ ಜವಾಬ್ದಾರಿ ದೊಡ್ಡದು ಎಂದರು. ಪ್ರಾಚಾರ್ಯ ಬಿ.ಕೆ. ಕಠಾರೆ ಪ್ರಾಸ್ತಾವಿಕ ಮಾತನಾಡಿದರು. ಎಂ.ಬಿ. ವಾಲಿ, ಡಿ.ಎಸ್.ಗುಂಡ್ಲೂರು, ಪಿ.ಎ್. ಹಾದಿಮನಿ, ಎಂ.ಎನ್. ಸಂಗೊಳ್ಳಿ, ಕೆ.ಎಸ್.ಅಂಗಡಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎಸ್.ಬಿ. ಗುಡೆನ್ನವರ, ಉಪನ್ಯಾಸಕ ಎಂ.ಆರ್. ಶಿವನಾಯ್ಕರ, ಎನ್.ಬಿ. ಸಕ್ರೆಪ್ಪನವರ, ಎಂ.ಬಿ. ಹಂಜಿ, ಕೆ.ಎಲ್.ಸಣ್ಣನಾಯ್ಕರ ಇದ್ದರು.