ರಬಕವಿ ರಾಂಪೂರದಲ್ಲಿ ನಡೆದ ಸಾದು ಸಂತರ ಪಾದಪೂಜೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಹಾಗು ರಬಕವಿ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿದರು. ಇಂಚಗೇರಿಯ ರುದ್ರಮನಿ ಸ್ವಾಮೀಜಿ, ಗುರು ಹೊರಟ್ಟಿ, ಎ.ಬಿ. ದೇಸಾಯಿ, ಮಲ್ಲು ಭದ್ರನ್ನವರ, ರಾಜು ಕಡಕಬಾವಿ, ಗೋಪಾಲ ಲಡ್ಡಾ, ಶೇಖರ ಕೊಟ್ರಶೆಟ್ಟಿ, ಚಿದಾನಂದ ಹೊರಟ್ಟಿ ಇತರರಿದ್ದರು. 
ಜಿಲ್ಲೆ

ವ್ಯವಹಾರದಲ್ಲಿ ಪ್ರಾಮಾಣಿಕತೆ ಇರಲಿ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ಯಾವುದೇ ವ್ಯವಹಾರವನ್ನು ನಾವು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಮಾತ್ರ ನಾವು ಯಶಸ್ವಿ ಕಾಣುತ್ತೇವೆ ಎಂದು ರಬಕವಿ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ರಬಕವಿಯ ಹೊರಟ್ಟಿ ಪರಿವಾರದವರ ನೂತನ ಮಳಿಗೆಯಲ್ಲಿ ಬುಧವಾರ ಪಾದಪೂಜೆ ಸ್ವೀಕರಿಸಿ ಅವರು ಮಾತನಾಡಿದರು.

ಕೇವಲ ಲಾಭದ ದೃಷ್ಠಿಕೋನ ಒಂದೇ ಆಗದೆ ಜನರ ಪ್ರೀತಿಗೆ ಪಾತ್ರರಾಗಬೇಕು. ವ್ಯಾಪಾರದಲ್ಲಿ ಉತ್ತಮ ಸೇವೆ, ಗುಣಮಟ್ಟದ ವಸ್ತುಗಳು, ಒಂದಿಷ್ಟು ಉತ್ತಮ ನಯವಿನಯದ ಮಾತುಗಳನ್ನಾಡಿದರೆ, ಆ ವ್ಯಾಪಾರ ಉತ್ತುಂಗಕ್ಕೇರುತ್ತದೆ ಎಂದರು.

ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿ, ವ್ಯವಹಾರ ಸ್ನೇಹಮಯವಾಗಿ ಬೆಳೆಯಬೇಕು. ಅದರಲ್ಲಿ ಗ್ರಾಹಕ ಮತ್ತು ಮಾಲೀಕ ಇಬ್ಬರು ತೃಪ್ತಿಪಟ್ಟುಕೊಳ್ಳುವಂತಾಗುವುದೇ ವ್ಯವಹಾರ ಎಂದರು.

ಇಂಚಗೇರಿಯ ರುದ್ರಮನಿ ಸ್ವಾಮೀಜಿ ಮಾತನಾಡಿದರು.

ಗುರು ಹೊರಟ್ಟಿ, ಎ.ಬಿ. ದೇಸಾಯಿ, ಮಲ್ಲು ಭದ್ರನ್ನವರ, ರಾಜು ಕಡಕಬಾವಿ, ಗೋಪಾಲ ಲಡ್ಡಾ, ಶೇಖರ ಕೊಟ್ರಶೆಟ್ಟಿ, ಚಿದಾನಂದ ಹೊರಟ್ಟಿ, ಬಸವರಾಜ ದಲಾಲ, ಸುವರ್ಣಾ ಹೊರಟ್ಟಿ, ಗೀತಾ ಮಿರ್ಜಿ, ಗಿರಿಜಾ ಅಂದಾನಿ, ಆರುಷಿ, ಮಂಜುಳಾ ಕೆಂಧೂಳಿ, ಆರ್. ಪ್ರಜ್ವಲ್, ಕೆ. ಶಶಾಂಕ, ಬಿ. ಕೆ. ಚಂದ್ರಶೇಖರ, ಮನೋಜ ಆಳಂದಕರ, ಸಿ.ಜಿ. ಕಿರಣ, ಮಹಾದೇವಪ್ಪ ಹೊರಟ್ಟಿ ಇತರರಿದ್ದರು.