ಜಿಲ್ಲೆ

ಸಂಸ್ಕೃತಿ-ಹಿಂದುತ್ವ ಉಳಿವಿಗೆ ಕಟಿಬದ್ಧರಾಗಲಿ

ಹಾನಗಲ್ಲ: ಧಾರ್ಮಿಕ ಆಚರಣೆ ನಮ್ಮ ಸಂಸ್ಕೃತಿಯನ್ನು ಮತ್ತು ಹಿಂದುತ್ವವನ್ನು ಉಳಿಸಿಕೊಳ್ಳಲು ಯುವ ಸಮುದಾಯ ಕಟಿಬದ್ಧರಾಗಬೇಕಿದೆ ಎಂದು ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮಿಗಳು ಹೇಳಿದರು.

ಪಟ್ಟಣದ ತಾರಕೇಶ್ವರ ದೇವಸ್ಥಾನದ ಆವರಣದಲ್ಲಿ 5ನೇ ವರ್ಷದ ವಿರಾಟಹಿಂದು ಮಹಾಗಣಪತಿ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ಧರ್ಮ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಾರ್ಯಕ್ರಮಗಳು ಯಶಸ್ವಿಯಾಗಲು ನಮ್ಮ ಸಂಕಲ್ಪವಿರಬೇಕು. ಗಣೇಶಹಬ್ಬವನ್ನು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಸಂಘಟನೆಗಾಗಿ ಹುಟ್ಟುಹಾಕಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮ ಜಾಗೃತಿಗಾಗಿ, ಭಾವೈಕ್ಯಕ್ಕಾಗಿ, ಸಾಮರಸ್ಯಕ್ಕಾಗಿ ಸಂಘಟನೆಯ ಅಗತ್ಯವಿದೆ. ಎಲ್ಲ ಸವಾಲುಗಳನ್ನೂ ಸಂಘಟನಾತ್ಮಕ ಧಾರ್ಮಿಕ ಕಾರ್ಯಗಳ ಮೂಲಕ ಉತ್ತರಿಸಬೇಕಿದೆ ಎಂದರು.

ಮನೋಜ ಕಲಾಲ, ನಾಗರಾಜ ಎರಿಮನಿ, ರವಿ ಪುರದ, ಪ್ರಮೋದ ದೇಶಪಾಂಡೆ, ರವಿಚಂದ್ರ ಪುರೋಹಿತ, ಬಸವರಾಜ ಭಜಂತ್ರಿ, ಕಲ್ಯಾಣಕುಮಾರ ಶೆಟ್ಟರ, ಭೋಜರಾಜ್ ಕರೂದಿ, ಅಜಯ ರೂಗಿಶೆಟ್ಟರ, ಬಸವರಾಜ ಪ್ರವೀಣ ಸುಲಾಖೆ, ಬಸವರಾಜ ಮಟ್ಟಿಮನಿ, ಈಶ್ವರ ನಿಂಗೋಜಿ, ತುಳಜೇಶ ಮೂಲಿಮನಿ ಇತರರು ಉಪಸ್ಥಿತರಿದ್ದರು.