ಕಕ್ಕೇರಿ: ಈದ್ಗಾ ನಿರ್ಮಾಣಕ್ಕೆ ಭೂದಾನ ಮಾಡಿರುವ ದಾವಲಸಾಬ್ ಹಕೀಮ್ ಹಾಗೂ ಕುಟುಂಬದ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಖಾನಾಪುರ ಭಾಗ್ಯಲ$್ಮ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯ ರಿಯಾಜ್ಅಹ್ಮದ್ ಪಟೇಲ್ ಹೇಳಿದರು.
ಸಮೀಪದ ಭೂರನಕಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಈದ್ಗಾ ನಿರ್ಮಾಣಕ್ಕೆ 1.2 ಎಕರೆ ಭೂದಾನ ನೀಡಿದ ನಿವೃತ್ತ ಶಿಕ ದಾವಲಸಾಬ್ ಹಕೀಮ್ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪಿಎಸ್ಐ ಎಸ್.ಎಸ್.ಬಾದಾಮಿ ಮಾತನಾಡಿ, ಪ್ರತಿಯೊಬ್ಬರು ದುಡಿಮೆಯ ಅಲ್ಪ ಭಾಗವನ್ನು ದಾನ, ಧರ್ಮ ಮಾಡುವ ಮೂಲಕ ಪರೋಪಕಾರ್ಯ ಮಾಡಬೇಕು ಎಂದು ತಿಳಿಸಿದರು. ಭೂದಾನಿ ದಾವಲಸಾಬ್ ಹಕೀಮ್, ಮರಾಠಾ ಸಮುದಾಯದ ಮುಖಂಡ ಮಹೇಶ ಪಾಟೀಲ ಮಾತನಾಡಿದರು.
ಮುಖಂಡರಾದ ಎಂ.ಎಂ.ಸಾಹುಕಾರ, ಇಮಾಮಸಾಬ್ ಕಿತ್ತೂರು, ಗೌಸ್ಲಾಲ್ ಪಟೇಲ್, ಹಾಪೀಜ್ ಯಾಸೀನ್, ಜಮಾತ್ ಅಧ್ಯ ಅಲ್ಲಾಭ ಹರಗಿ, ಇಮ್ರಾನ್ಶಬ್ಬೀರ್ ಸಾಹೇಬ್ಖಾನ್, ಇಸೂಬ್ ಹರಗಿ, ಸುಭಾನಿ ದೇಶನೂರ, ಸಿಕಂದರ್ ಸಾಹುಕಾರ, ಇಾರ್ನ್ ಹರಗಿ, ಮಹಾದೇವ ಸಾಗರೇಕರ, ಇಕ್ಬಾಲ್ ಹುದಲಿ, ಅನ್ವರ್ ಹುದಲಿ, ರಾಮಪ್ಪ ದೊಡ್ಡಮನಿ, ಶಬ್ಬೀರ್ ಬೇಪಾರಿ, ವಸಂತ ಪಾಟೀಲ, ನಿಲೇಶ ಪಾಟೀಲ, ರಿಜ್ವಾನ್ ಇಟಗಿ, ಎಂ.ಎಂ.ರಾಜೀಬಾಯಿ, ಬಸವರಾಜ ಬಂಗಿ, ಹೀನಾಯತ್ ಕಿತ್ತೂರು, ಶರಪುನ್ನಿಸ್ ಹಕೀಮ್, ಶಕೀಲ್ಅಹ್ಮದ್, ಮಹಮ್ಮದ್ ಇಲಿಯಾಸ್, ಶಹನಜ್ ಸುಲೇಮಾನ್ ಸನದಿ, ಮಿನಾಜ್ ಕಮಾಲ್ ಇತರರಿದ್ದರು.