ಗಂಗಾವತಿ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ನಗರ ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ನಿಮಿತ್ತ ಜಾಗೃತಿ ಅಭಿಯಾನ ಜರುಗಿತು. ನಗರ ಪಿಐ ಪ್ರಕಾಶ ಮಾಳೆ, ಸಂಚಾರಿ ಠಾಣೆ ಪಿಎಸ್‌ಐ ಶಾರದಮ್ಮ, ಪಿಎಸ್‌ಐಗಳಾದ ಶರಣಪ್ಪ, ಶಿವಶರಣಪ್ಪ, ಅಜೀಜ ಇತರರಿದ್ದರು. 
ಜಿಲ್ಲೆ

ಎಟಿಎಂ ಬಳಸುವಾಗ ಎಚ್ಚರಿಕೆ ಇರಲಿ

ರುದ್ರಪ್ಪ ವಾಲಿ

ಗಂಗಾವತಿ: ಬ್ಯಾಂಕಿಂಗ್ ಡಿಜಿಟಲ್ ವಂಚನೆ ಪ್ರಕರಣ ಕಂಡು ಬಂದಲ್ಲಿ ಸೈಬರ್ ಕ್ರೈಂಗೆ ಮಾಹಿತಿ ನೀಡಬೇಕಿದ್ದು, ಕಳ್ಳತನ ಪ್ರಕರಣ ನಿಯಂತ್ರಣಕ್ಕೆ ಸಾರ್ವಜನಿಕ ಸಹಕಾರ ಮುಖ್ಯ ಎಂದು ನಗರ ಪಿಐ ಪ್ರಕಾಶ ಮಾಳೆ ಸಲಹೆ ನೀಡಿದರು.

ನಗರ ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಎಟಿಎಂ ಬಳಸುವಾಗ ಎಚ್ಚರಿಕೆ ಇರಲಿ. ಅಕ್ಕಪಕ್ಕದ ಜನತೆ ಬಗ್ಗೆ ನಿಗಾವಹಿಸಿ. ೆನ್ ಕರೆ ಮೂಲಕ ಬ್ಯಾಂಕ್ ಮಾಹಿತಿ ಕೇಳಿದಾಗ ಯಾವುದೇ ಕಾರಣಕ್ಕೂ ನೀಡಬಾರದು. ಮನೆ, ವಾಹನ, ಸರಗಳ್ಳತನ ಬಗ್ಗೆ ಜಾಗೃತರಾಗಿರಬೇಕಿದ್ದು, ಕಳವು ಪ್ರಕರಣ ನಿಯಂತ್ರಣಕ್ಕೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅಪರಾಧ ಮತ್ತು ಶಿಕ್ಷೆ ಬಗ್ಗೆ ಮಾಹಿತಿ ನೀಡಲಾಯಿತು.

ನಗರದ ಶ್ರೀಕೊಟ್ಟೂರೇಶ್ವರ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ನಗರದಾದ್ಯಂತ ಆಯೋಜಿಸಿದ್ದ ಅಭಿಯಾನದಲ್ಲಿ ಅಪರಾಧ ತಡೆ ಸುರಕ್ಷತೆಯ ಬಗ್ಗೆ ಸಲಹೆ ನೀಡಲಾಯಿತು. ಸಂಚಾರಿ ಠಾಣೆ ಪಿಎಸ್‌ಐ ಶಾರದಮ್ಮ, ಪಿಎಸ್‌ಐಗಳಾದ ಶರಣಪ್ಪ, ಶಿವಶರಣಪ್ಪ, ಅಜೀಜ, ಮಹೇಶ ಇತರರಿದ್ದರು.