ಜಿಲ್ಲೆ

ಫೈನಾನ್ಸ್‌ಗಳ ಬಗ್ಗೆ ಜಾಗ್ರತೆ ವಹಿಸಲಿ

ರಾಘವೇಂದ್ರಗೌಡ ಭೀ ಪಾಟೀಲ್

ಚಿಕ್ಕೋಡಿ: ಸಾಲದ ವಿಷಯವಾಗಿ ಫೈನಾನ್ಸ್, ಸಂಘ-ಸಂಸ್ಥೆಯವರು ಕಿರುಕುಳ ಕೊಡುತ್ತಿದ್ದರೆ ಅಂಥವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕೆಂದು ಡಿವೈಎಸ್‌ಪಿ ಗೋಪಾಲಕೃಷ್ಣ ಗೌಡರ ಹೇಳಿದರು.

ತಾಲೂಕಿನ ಕರೋಶಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್ಸಿ, ಎಸ್ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಹೆಚ್ಚಿನ ಬಡ್ಡಿ ಆಕರಣೆ ಮಾಡುವ ಅನಧಿಕೃತ ಫೈನಾನ್ಸ್‌ಗಳ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರಬೇಕು. ಸರ್ಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದರು.

ಚಿಕ್ಕೋಡಿ ಪಿಎಸ್‌ಐ ಬಸಗೌಡ ನೆರ್ಲೆ ಮಾತನಾಡಿದರು. ಗ್ರಾಪಂ ಸದಸ್ಯ ಸಂಜು ಕಾಂಬಳೆ, ಮಾರುತಿ ಯಲಾಯಿಗೋಳ, ಪ್ರಾಥಮಿಕ ಶಾಲಾ ಶಿಕ್ಷಕರಾದ ಮಾರುತಿ ಸನದಿ, ರಘು ಸನದಿ, ಬಾಬುರಾವ ಘಟ್ಟಿ, ಗೀತಾ ಕಾಂಬಳೆ, ವಕೀಲರಾದ ಶೋಭಾ ತಳವಾರ, ಸಂಗೀತಾ, ಮಹಾದೇವ ಗಿರಿಜವ್ವಗೋಳ, ಚೇತನ ಹೊನ್ನಗೋಳ ಇತರರಿದ್ದರು.