ಜಿಲ್ಲೆ

ಬಿಡಿಸಿಸಿ ಬ್ಯಾಂಕ್​ ನೂತನ ಸದಸ್ಯ ರಾಹುಲಗೆ ಅದ್ದೂರಿ ಸ್ವಾಗತ

ಗೋಕಾಕ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ನಿರ್ದೇಶಕರಾಗಿ ಬೆಳಗಾವಿ ತಾಲೂಕಿನಿಂದ ಅವಿರೋಧ ಆಯ್ಕೆಯಾಗಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ರಾಹುಲ ಜಾರಕಿಹೊಳಿ ಅವರು ಸ್ಥಳಿಯ ಜಗಜ್ಯೋತಿ ಬಸವಣ್ಣ, ಡಾ.ಬಾಬಾಸಾಹೇಬ ಅಂಬೇಡ್ಕರ್​ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಮಂಗಳವಾರ ಗೌರವ ಸಲ್ಲಿಸಿದರು.

ಬಳಿಕ ಇಲ್ಲಿನ ಶ್ರೀ ಮಹಾಲಕ್ಷಿ$್ಮ ದೇವಸ್ಥಾನಕ್ಕೆ ತೆರಳಿ ಶಕ್ತಿದೇವತೆಯ ಆಶೀರ್ವಾದ ಪಡೆದರು. ಸ್ಥಳಿಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯುವ ಕಾಂಗ್ರೆಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ನಿರ್ದೇಶಕ ರಾಹುಲ ಜಾರಕಿಹೊಳಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಕಾಂಗ್ರೆಸ್​ ಮುಖಂಡರಾದ ವಿವೇಕ ಜತ್ತಿ, ಶಿವು ಪಾಟೀಲ, ಚಂದ್ರಶೇಖರ ಕೊಣ್ಣೂರ, ಕಲ್ಪನಾ ಜೋಶಿ, ಜಾವೀದ ಗೋಕಾಕ ಇತರರಿದ್ದರು.