ಜಿಲ್ಲೆ

ಬಿಡಿಸಿಸಿ ಬ್ಯಾಂಕ್ ಚುನಾವಣೆ: ಗೆದ್ದವರ‍್ಯಾರು?

Vijayanagara - Veerendra

* ೧೧ ಸ್ಥಾನಗಳಿಗೆ ೨೮ ಜನರ ಸ್ಪರ್ಧೆ 
* ಪಿ.ಟಿ.ಪರಮೇಶ್ವರಗೆ ಒಂದು ಮತದಿಂದ ಸೋಲು
* ಕೆ.ತಿಪ್ಪೇಸ್ವಾಮಿ ಗುಂಡುಮುಣುಗು, ಜೆ.ಎಂ.ಶಿವಪ್ರಸಾದ ಅವಿರೋಧ ಆಯ್ಕೆ

ಹೊಸಪೇಟೆ: ಇಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಿರ್ದೇಶಕರ ಆಯ್ಕೆಗೆ ಭಾನುವಾರ ಹಮ್ಮಿಕೊಂಡಿದ್ದ ಚುನಾವಣೆ ವಿಧಾನಸಭೆ ಸಾರ್ವತ್ರಿಕ ಸಮರವನ್ನೂ ಮೀರಿಸುವಂತಿತ್ತು. ಶಾಸಕಿ ಎಂ.ಪಿ.ಲತಾ, ಮಾಜಿ ಶಾಸಕ ಭೀಮಾನಾಯ್ಕ, ಸಂಸದರ ವೈ.ದೇವೇಂದ್ರಪ್ಪ ಅವರ ಪುತ್ರ ವೈ.ಅಣ್ಣಪ್ಪ ಸೇರಿದಂತೆ ೧೩ ಜನರು ಗೆಲುವಿನ ನಗೆ ಬೀರಿದ್ದರೆ, ಒಂದು ಮತದಿಂದ ಪರಾಭಾವಗೊಂಡಿರುವ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕಗೆ ಮುಖಭಂಗವಾಗಿದೆ.

ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡು ಬ್ಯಾಂಕ್‌ನ ಒಟ್ಟು ೧೪ ನಿರ್ದೇಶಕರ ಸ್ಥಾನಗಳ ಪೈಕಿ ಕೂಡ್ಲಿಗಿಯಿಂದ ಕೆ.ತಿಪ್ಪೇಸ್ವಾಮಿ, ಸಂಡೂರ್ ತಾಲೂಕಿನ ಜೆ.ಎಂ.ಶಿವಪ್ರಸಾದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿರುಗುಪ್ಪ ತಾಲೂಕು ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಸಂಬAಧಿಸಿ ಮೂವರು ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಅದನ್ನೊರತುಪಡಿಸಿ, ಇನ್ನುಳಿದ ೧೧ ಸ್ಥಾನಗಳಿಗೆ ೨೮ ಜನರು ಸ್ಪರ್ಧಿಸಿದ್ದರು. ನಗರದ ಬಿಡಿಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಒಟ್ಟು ೨೮೫ ಪೈಕಿ ೨೮೦ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. ೯೮.೨೪ ರಷ್ಟು ಮತದಾನ ದಾಖಲಾಗಿದೆ.
ಮತದಾನದ ಬಳಿಕ ಸಂಜೆ ಮತ ಎಣಿಕೆಯಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿಗಳ ಗೆಲುವಿನ ಸುದ್ದಿ ಕೇಳುತ್ತಿದ್ದಂತೆ ಬ್ಯಾಂಕ್ ಎದುರು ನೆರೆದಿದ್ದ ಬೆಂಬಲಿಗರು, ಅಭಿಮಾನಿಗಳು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು.

ಕ್ಷೇತ್ರವಾರು ವಿಜೇತರ ವಿವರ:
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಕೂಡ್ಲಿಗಿ ತಾಲೂಕಿನಿಂದ ಕೆ.ತಿಪ್ಪೇಸ್ವಾಮಿ ಗುಂಡುಮುಣುಗು, ಸಂಡೂರು ತಾಲೂಕಿನಿಂದ ಜೆ.ಎಂ.ಶಿವಪ್ರಸಾದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊಸಪೇಟೆಯಿಂದ ಎಲ್.ಎಸ್.ಆನಂದ, ಕಂಪ್ಲಿ ಕ್ಷೇತ್ರದಿಂದ ಪಿ.ಮೂಕಯ್ಯಸ್ವಾಮಿ, ಹಗರಿಬೊಮ್ಮನಹಳ್ಳಿಯಿಂದ ಎಲ್.ಬಿ.ಪಿ.ಭೀಮಾನಾಯ್ಕ, ಹಡಗಲಿಯಿಂದ ಐಗೋಳ ಚಿದಾನಂದಪ್ಪ, ಕೊಟ್ಟೂರು ತಾಲೂಕಿನಿಂದ ಐ. ದಾರುಕೇಶ, ಹರಪನಹಳ್ಳಿಯಿಂದ ವೈ.ಅಣ್ಣಪ್ಪ, ಬಳ್ಳಾರಿ ತಾಲೂಕಿನಿಂದ ಬಿ.ನವೀಕುಮಾರ ರೆಡ್ಡಿ, ಕುರುಗೋಡು ತಾಲೂಕಿನಿಂದ ಹುಲುಗಪ್ಪ ನಾಯಕರ, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ವಿ.ಆರ್.ಸಂದೀಪ್ ಸಿಂಗ್, ಪತ್ತಿನ ಮತ್ತು ಅರ್ಬನ್ ಬ್ಯಾಂಕ್‌ಗಳಿAದ ಪಿ.ವಿಶ್ವನಾಥ, ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮತ ಗಳಿಕೆ ಮೂಲಕ ಜಯಭೇರಿ ಬಾರಿಸಿದರು.

ಎಂ.ಪಿ. ಲತಾಗೆ ಗರಿಷ್ಟ ಮತ:
ಇತರೆ ಸಹಕಾರ ಸಂಘಗಳ ಕ್ಷೇತ್ರ ಒಟ್ಟು ೯೭ ಮತಗಳಲ್ಲಿ ಎಂ.ಪಿ.ಲತಾ ೫೦ ಮತ ಪಡೆದು, ವಿಜಯಮಾಲೆ ಧರಿಸಿದ್ದಾರೆ. ಬಿಡಿಸಿಸಿ ೧೨ ಕ್ಷೇತ್ರಗಳ ಪೈಕಿ ಲತಾ ಮಲ್ಲಿಕಾರ್ಜು ಅತಿ ಹೆಚ್ಚು ಮತಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಿ.ಟಿ.ಪಿ ಕನಸು ಭಗ್ನ:
ಕಳೆದ ವಿಧಾನಸಭೆ ಚುನಾವಣೆಯ ಹಡಗಲಿ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಈ ಬಾರಿ ಬಿಡಿಸಿಸಿ ಅಧ್ಯಕ್ಷ ಗಾದಿಗೇರುವ ಮಹದಾಸೆ ಹೊಂದಿದ್ದರು. ಹಡಗಲಿ ತಾಲೂಕು ಪತ್ತಿನ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ
ಬ್ಯಾAಕ್‌ನ ಮಾಜಿ ನಿರ್ದೇಶಕ ಐಗೋಳ ಚಿದಾನಂದ ೧೦ ಮತ ಪಡೆದಿದ್ದಾರೆ. ಅವರ ಎದುರಾಳಿಯಾಗಿದ್ದ ಪಿಟಿಪಿ ಒಂದು ಮತದಿಂದ ಮುಗ್ಗರಿಸಿದ್ದಾರೆ.

ಈ ಹಿಂದೆ ಬಿಡಿಸಿಸಿ ಬ್ಯಾಂಕ್‌ಗೆ ನಮ್ಮ ಸಹೋದರ ಎಂ.ಪಿ.ರವೀAದ್ರ ಕೂಡಾ ಅಧ್ಯಕ್ಷರಾಗಿದ್ದರು. ನಾನು ಯಾವುದನ್ನೂ ನಿರೀಕ್ಷಿಸಿ ಚುನಾವಣೆಗೆ ನಿಂತಿಲ್ಲ. ಕ್ಷೇತ್ರದ ಜನರು, ರೈತರ ಒತ್ತಾಯದ ಮೇರೆಗೆ ಸ್ಪರ್ಧಿಸಿ, ನಿರ್ದೇಶಕಿಯಾಗಿ ಆಯ್ಕೆಯಾಗಿದ್ದೇನೆ. ಬ್ಯಾಂಕ್‌ನ ಎಲ್ಲ ನಿರ್ದೇಶಕರು ಬೆಂಬಲಿಸಿದರೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. - ಎಂ.ಪಿ.ಲತಾ, ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕಿ. ಎಲ್ಲ ಅಧಿಕಾರಗಳು ನನ್ನ ನಿರೀಕ್ಷೆ ಮೀರಿ ಒಲಿದು ಬಂದಿದೆ. ಗ್ರಾ.ಪಂ. ಗೆ ಚುನಾವಣೆಗೆ ಸಿದ್ಧನಾಗಿದ್ದ ನನ್ನು ಪಕ್ಷದ ಹಿರಿಯರು ಜಿ.ಪಂ.ಗೆ ಅವಕಾಶ ನೀಡಿ, ಗೆಲ್ಲಿಸಿದರು. ಆನಂತರ ಮತದಾರರ ಶ್ರೀರಕ್ಷೆಯಿಂದ ಎರಡು ಬಾರಿ ಶಾಸಕನಾಗಿದ್ದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಪೆಯಿಂದ ಕೆಎಂಎಫ್ ಅಧ್ಯಕ್ಷನಾಗಿದ್ದೇನೆ. ಸಹಕಾರ ರಂಗದ ರೈತರ ಸೇವೆಗಾಗಿ ಬಿಡಿಸಿಸಿಗೆ ಆಯ್ಕೆಯಾಗಿದ್ದೇನೆ. ಎಲ್ಲ ನಿರ್ದೇಶಕರು ಬಯಸಿದರೆ, ಬಿಡಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತೇನೆ. - ಭೀಮಾನಾಯ್ಕ, ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ.