ಜಿಲ್ಲೆ

ಪ್ರಾಣ ಕೊಟ್ಟೆವು; ಧಾರವಾಡಕ್ಕೆ ನೀರು ಕೊಡಲ್ಲ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಭವಿಷ್ಯದ ದಿನಗಳಲ್ಲಿ ಬೆಳಗಾವಿ ಮಹಾನಗರ ಸೇರಿ ಗ್ರಾಮೀಣ ಪ್ರದೇಶಗಳ ಜನ, ಜಾನುವಾರಗಳಿಗೆ ಕುಡಿಯುವ ನೀರು, ಕೃಷಿ ಜಮೀನುಗಳಿಗೆ ನೀರಿನ ಸಮಸ್ಯೆ ಉದ್ಬವಿಸದಂತೆ ಈಗಿನಿಂದಲೇ ಹೋರಾಟ ಆರಂಭಿಸೋಣ. ನೀರಿಗಾಗಿ ಪ್ರಾಣ ಕೊಡಲು ಸಜ್ಜಾಗಿದ್ದೇವೆ. ಯಾವುದೇ ಕಾರಣಕ್ಕೂ ಧಾರವಾಡ ಕೈಗಾರಿಕೆ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ.

ಇದು ನಗರದ ಮಾರುತಿ ಗಲ್ಲಿಯ ಮಾರುತಿ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳು, ವ್ಯಾಪಾರಿಗಳು, ಮಾಜಿ ಶಾಸಕರು,‌ಮಠಾಧೀಶರು ಸೇರಿ ಗುರುವಾರ ಹಮ್ಮಿಕೊಂಡಿದ್ದ ನಮ್ಮ ನೀರು ನಮ್ಮ ಹಕ್ಕು ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ಹಿಡಕಲ್ ಜಲಾಶಯದಿಂದ ಧಾರಾವಾಡ ಕೈಗಾರಿಕೆ ಪ್ರದೇಶಗಳಿಗೆ ನೀರು ಪೂರೈಕೆ ಯೋಜನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್, ಅಭಯ ಪಾಟೀಲ, ಸಂಸದ ಜಗದೀಶ್ ಶೆಟ್ಟರ್ ಸೇರಿ ಎಲ್ಲ ಜನಪ್ರತಿನಿಧಿಗಳು ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಸರ್ಕಾರವು ಕುತಂತ್ರದಿಂದ ಯೋಜನೆ ಆರಂಭಿಸಿದೆ. ನಾವೆಲ್ಲಾ ಉಗ್ರ ಹೋರಟ ಆರಂಭಿಸೋಣ. ಮನೆ ಮನೆಗೆ ತೆರಳಿ ಜಾಗೃತಿ ಅಭಿಯಾನ ನಡೆಸೋಣ ಎಂದು ಒಕ್ಕೂರಲಗ ನಿರ್ಣಯ ಕೈಗೊಂಡರು.

ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ಸುಜೀತ ಮುಳಗುಂದ, ಮಲ್ಲೇಶ ಚೌಗಲಾ, ದೀಲಿಪ ಕಾಮತ, ದೀಪಕ ಗುಡಗನಟ್ಟಿ ಇತರರಿದ್ದರು.