ಜಿಲ್ಲೆ

155 ಕೋಟಿ ರೂಪಾಯಿ ವರ್ಗಾವಣೆ ವಿವಾದ- ರದ್ದುಗೊಂಡ ಬಿಸಿಯು ಶಂಕುಸ್ಥಾಪನೆ ಕಾರ್ಯಕ್ರಮ

djtrupti

ಬೆಂಗಳೂರು : ಸಿಂಡಿಕೇಟ್ ಸದಸ್ಯರ ವಿರೋಧದಿಂದಾಗಿ ನ.18ರಂದು ನಡೆಯಬೇಕಾಗಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯ (ಬಿಸಿಯು) ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮ ಮುಂದೂಡಿದೆ.  ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ 155 ಕೋಟಿ ರೂ.ಗಳನ್ನು ಸರ್ಕಾರದ ಇತರೆ ಇಲಾಖೆಗೆ ವರ್ಗಾವಣೆ ಮಾಡಲು ನಿರ್ಧರಿಸಿತ್ತು. ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳದೇ ಕುಲಪತಿ ಏಕಾಏಕಿ ಈ ತೀರ್ಮಾನ ತೆಗೆದುಕೊಂಡಿದ್ದಕ್ಕೆ

ಸಿಂಡಿಕೇಟ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಮಂಗಳವಾರ ಸಂಜೆ ಬಿಸಿಯು ಮುಂದೆ ಮೌನ ಪ್ರತಿಭಟನೆಯನ್ನು ನಡೆಸಿದರು.
ವಿಚಾರ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದಂತೆಯೇ ಬಿಸಿಯು ತಕ್ಷಣ ಸಂಜೆಗೆ ವಿಶೇಷ ಸಿಂಡಿಕೇಟ್ ಸಭೆ ಕೆರೆಯಿತು. ಈ ವಿಚಾರವಾಗಿ ಸುಮಾರು 5 ಗಂಟೆಗಳ ಕಾಲ ಸಭೆ ನಡೆಯಿತು. ಸರ್ಕಾರದ ಪರವಾದ ಸಿಂಡಿಕೇಟ್ ಸದಸ್ಯರು ಕುಲಪತಿ ನಡೆಯನ್ನು ಸಮರ್ಥಿಸಿಕೊಂಡರು.

ಆದರೆ, ಸಿಂಡಿಕೇಟ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಕನಿಷ್ಠ ಉದ್ಘಾಟನೆಗೆ ಅವಕಾಶ ನೀಡುವಂತೆ ಕುಲಪತಿ ಸಭೆಯಲ್ಲಿ ಮನವಿ ಮಾಡಿದರು. ಆದರೆ, ಇದಕ್ಕೆ ಸಿಂಡಿಕೇಟ್ ಸದಸ್ಯರು ಒಪ್ಪಿಗೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ರದ್ದಾಗಿದೆ.  ‘ವಿವಿಯು ತಪ್ಪು ಮಾಡಿರುವುದನ್ನು ಸಭೆಯಲ್ಲಿ ಒಪ್ಪಿಕೊಂಡಿದೆ. ಈ ಹಿನ್ನೆಲೆ ಬುಧವಾರ ನಡೆಯಬೇಕಾಗಿದ್ದ ಶಂಕುಸ್ಥಾಪನೆ ಕಾರ್ಯವನ್ನು ರದ್ದು ಮಾಡಿದೆ. ಮುಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ’ ಎಂದು ಸಿಂಡಿಕೇಟ್ ಸದಸ್ಯ ಕರಣ್ ಕುಮಾರ್ ತಿಳಿಸಿದ್ದಾರೆ.